ದಾವಣಗೆರೆ: ಮಹಿಳೆಯೊಬ್ಬಳನ್ನು ವಶೀಕರಣ ಮಾಡಲು ಬಂದ ಆರೋಪದ ಮೇಲೆ ಇಬ್ಬರು ಯುವಕರಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಗಳೂರು ತಾಲೂಕಿನ ಉಚ್ವಂಗಿಪುರ ಗ್ರಾಮದಲ್ಲಿ ನಡೆದಿದೆ.
ಮಹಿಳೆಯ ವಶೀಕರಣಕ್ಕೆ ಬಂದಿದ್ದ ಯುವಕರಿಗೆ ಗ್ರಾಮಸ್ಥರಿಂದ ಗೂಸಾ - Villagers Attacked on youths
70 ಸಾವಿರ ರೂಪಾಯಿ ಪಡೆದು ಮಹಿಳೆಯನ್ನು ವಶೀಕರಣಕ್ಕೆ ಯುವಕರು ಮುಂದಾಗಿದ್ದರು. ವಶೀಕರಣ ಮಾಡಲು ಹಣ ನೀಡಿದ್ದ ವ್ಯಕ್ತಿಯ ಹೆಸರನ್ನು ಯುವಕರು ಬಾಯಿ ಬಿಟ್ಟಿಲ್ಲ. ದಾವಣಗೆರೆ ಗಡಿಯಾರ ಕಂಬದ ಬಳಿ ವಾಸವಾಗಿದ್ದೇವೆ ಎಂದು ಯುವಕರು ಹೇಳಿಕೊಂಡಿದ್ದಾರೆ.
ಯುವಕರಿಗೆ ಗ್ರಾಮಸ್ಥರಿಂದ ಗೂಸಾ
ಉಚ್ಚಂಗಿಪುರ ಗ್ರಾಮದ ಮಹಿಳೆಯನ್ನು ವಶೀಕರಣ ಮಾಡಲು ಯುವಕರು ಬಂದಿದ್ದರು. ಈ ವೇಳೆ ವಿಷಯ ತಿಳಿದ ಗ್ರಾಮಸ್ಥರು ಯುವಕರಿಗೆ ಸರಿಯಾಗಿ ಥಳಿಸಿದ್ದಾರೆ. 70 ಸಾವಿರ ರೂಪಾಯಿ ಪಡೆದು ಮಹಿಳೆಯನ್ನು ವಶೀಕರಣಕ್ಕೆ ಯುವಕರು ಮುಂದಾಗಿದ್ದರು ಎನ್ನಲಾಗಿದೆ. ವಶೀಕರಣ ಮಾಡಲು ಹಣ ನೀಡಿದ್ದ ವ್ಯಕ್ತಿಯ ಹೆಸರನ್ನು ಯುವಕರು ಬಾಯಿ ಬಿಟ್ಟಿಲ್ಲ. ದಾವಣಗೆರೆ ಗಡಿಯಾರ ಕಂಬದ ಬಳಿ ವಾಸವಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಗ್ರಾಮಸ್ಥರು ಇಬ್ಬರನ್ನೂ ಬಿಳಚೋಡು ಪೊಲೀಸರಿಗೆ ಒಪ್ಪಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.