ದಾವಣಗೆರೆ: ಬೆಳೆ ಪರಿಹಾರ ನೀಡುವ ದಾಖಲಾತಿಯಲ್ಲಿ ಬೆಳೆ ಬದಲು ಮಾಡಿ ಅಧಿಕಾರ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ನ್ಯಾಮತಿ ತಾಲೂಕಿನ ಗ್ರಾಮ ಲೆಕ್ಕಿಗ ಪ್ರಶಾಂತ್ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶಿಸಿದ್ದಾರೆ.
ಬೆಳೆ ಪರಿಶೀಲನೆ ನಡೆಸದೆ ಪರಿಹಾರ ಪ್ರಕಟಿಸಿದ ಗ್ರಾಮ ಲೆಕ್ಕಿಗ ಸಸ್ಪೆಂಡ್.. - ದಾವಣಗೆರೆ ಗ್ರಾಮಲೆಕ್ಕಿಗನ ಅಮಾನತ್ತು
ಬೆಳೆ ಪರಿಹಾರ ಹಿನ್ನೆಲೆ 1012 ಆಕ್ಷೇಪಣೆ ಅರ್ಜಿಗಳು ಬಂದಿದ್ದವು. ಇದರಲ್ಲಿ ಜಗಳೂರು ತಾಲೂಕು ಒಂದರಲ್ಲೇ 715 ಅರ್ಜಿಗಳಿವೆ. ದಾಖಲಾತಿಯಲ್ಲಿ ಬೆಳೆ ಅದಲು ಬದಲು ಮಾಡಲಾಗುತ್ತಿದೆ. ಈ ಹಿನ್ನೆಲೆ ಕೃಷಿ, ತೋಟಗಾರಿಕೆ ಅಧಿಕಾರಿಗಳನ್ನು ಪರಿಶೀಲನೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.
![ಬೆಳೆ ಪರಿಶೀಲನೆ ನಡೆಸದೆ ಪರಿಹಾರ ಪ್ರಕಟಿಸಿದ ಗ್ರಾಮ ಲೆಕ್ಕಿಗ ಸಸ್ಪೆಂಡ್.. village-accountant-by-the-suspended-dc](https://etvbharatimages.akamaized.net/etvbharat/prod-images/768-512-5943337-thumbnail-3x2-dr.jpg)
ಮೆಕ್ಕೆಜೋಳ ಬೆಳೆದಿದ್ದ ರೈತನ ದಾಖಲಾತಿಯಲ್ಲಿ ಅಡಿಕೆ ಎಂದು ನಮೂದಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡದೇ ಬೆಳೆ ಹೆಸರು ಅದಲು ಬದಲು ಮಾಡಲಾಗಿದೆ. ಬೆಳೆ ಬದಲಾವಣೆ ಮಾಡಿದರೆ ಹೆಚ್ಚು ಪರಿಹಾರ ಸಿಗುತ್ತದೆ ಎಂದು ರೈತರು ಆರ್ಟಿಸಿಯಲ್ಲಿ ಬೆಳೆ ಹೆಸರು ಬದಲು ಹೇಳುತ್ತಾರೆ. ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡದೆ ರೈತರ ಮಾತು ಕೇಳಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಲೆಕ್ಕಿಗ ಪ್ರಶಾಂತ್ ಎಂಬುವರನ್ನ ಅಮಾನತುಗೊಳಿ ಆದೇಶ ಮಾಡಲಾಗಿದೆ ಎಂದು ಡಿಸಿ ಈಟಿವಿ ಭಾರತ್ಗೆ ತಿಳಿಸಿದ್ದಾರೆ.