ದಾವಣಗೆರೆ:2 ದಿನ ರಜೆ ಕೋರಿ ಪಿಡಿಒಗೆ ಗ್ರಾಮ ಪಂಚಾಯಿತಿ ಸದಸ್ಯ ಪತ್ರ ಬರೆದಿದ್ದಾನೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಹಳ್ಳಿಯಲ್ಲಿ ವಿಶೇಷ ಘಟನೆ ಜರುಗಿದೆ.
ನನ್ನ ತಮ್ಮನ ಮದುವೆಗೆ 2 ದಿನ ರಜೆ ಕೊಡಿ ಎಂದು ಪಿಡಿಒಗೆ ಪತ್ರ ಬರೆದ ಗ್ರಾಪಂ ಸದಸ್ಯ - ಪ್ರಜಾಕೀಯ ಪಕ್ಷ
ನನ್ನ ತಮ್ಮನ ಮದುವೆಗೆ ಎರಡು ದಿನ ರಜೆ ಕೊಡಿ ಎಂದು ಪಿಡಿಒಗೆ ಪತ್ರ ರವಾನಿಸಿದ್ದು, ಇದೇ ತಿಂಗಳು 28, 29ರಂದು ನನ್ನ ತಮ್ಮನ ಮದುವೆ, ಈ ಹಿನ್ನೆಲೆ ರಜೆ ಕೋರಿ ಪತ್ರ ಬರೆದಿದ್ದಾರೆ.
ಪ್ರಜಾಕೀಯ ಪಕ್ಷದ ಅರೇಹಳ್ಳಿ ಕ್ಷೇತ್ರದ ಪಂಚಾಯಿತಿ ಸದಸ್ಯರಾಗಿರುವ ಚೇತನ್ ಅರೇಹಳ್ಳಿ ಅವರಿಂದ ಪಿಡಿಒಗೆ ಪತ್ರ ರವಾನೆಯಾಗಿದೆ. ನನ್ನ ತಮ್ಮನ ಮದುವೆಗೆ ಎರಡು ದಿನ ರಜೆ ಕೊಡಿ ಎಂದು ಪಿಡಿಒಗೆ ಪತ್ರ ರವಾನಿಸಿದ್ದು, ಇದೇ ತಿಂಗಳು 28, 29ರಂದು ನನ್ನ ತಮ್ಮನ ಮದುವೆ, ಈ ಹಿನ್ನೆಲೆ ರಜೆ ಕೋರಿ ಪತ್ರ ಬರೆದಿದ್ದಾರೆ.
ಕಾನೂನು ಮೀರಿ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ, ನಾನು ಜನಪ್ರತಿನಿಧಿ ಅಲ್ಲ ಪ್ರಜಾ ಕಾರ್ಮಿಕ. ಈ ಹಿನ್ನೆಲೆ ರಜೆ ಕೊಡಿ ಎಂದು ಕೋರಿದ್ದಾರೆ. ಇನ್ನು ಚೇತನ್ ಪ್ರಜಾಕೀಯದಿಂದ ಗೆಲುವು ಪಡೆದಿರುವ ಮೊದಲ ಪ್ರತಿನಿಧಿಯಾಗಿದ್ದು, ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಈ ಹಿಂದೆಯೇ ಅರೇಹಳ್ಳಿಗೆ ಭೇಟಿ ನೀಡಿ ಶ್ಲಾಘನೆ ವ್ಯಕ್ತಪಡಿಸಿದ್ದರು.