ದಾವಣಗೆರೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಹಂತದ ಮತದಾನದ ದಿನ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದ ವ್ಯಕ್ತಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೃತ ಅಭ್ಯರ್ಥಿಗೆ ಗೆಲುವು - Result of Gram Panchayat Election
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಮೃತಪಟ್ಟಿದ್ದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೃತ ಅಭ್ಯರ್ಥಿಗೆ ಗೆಲುವು
ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಕದಕಟ್ಟೆ ಗ್ರಾಮದ ಡಿ. ಬಸಪ್ಪ ಗೆಲುವು ಸಾಧಿಸಿದವರು.
ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ 444 ಮತಗಳನ್ನು ಪಡೆದು ಮೃತ ಡಿ. ಬಸಪ್ಪ ಗೆದಿದ್ದಾರೆ. ಆದರೆ, ವಿಧಿಯಾಟ ಎಂದರೆ ತಮ್ಮ ಗೆಲುವು ಸಂಭ್ರಮಿಸಲು ಅಭ್ಯರ್ಥಿಯೇ ಇಲ್ಲ.