ಕರ್ನಾಟಕ

karnataka

ETV Bharat / state

ಕಾರ್ಮಿಕರ ಕ್ವಾರಂಟೈನ್​ಗೆ ವಿರೋಧ: ರಸ್ತೆ ತಡೆದು ಗ್ರಾಮಸ್ಥರ ಆಕ್ರೋಶ - Vasana village people protest against administration

ಮುಂಬೈನಿಂದ ಬಂದಿದ್ದ 16 ಜನರನ್ನು ನಂದಿಗುಡಿ ಹಾಗೂ ವಾಸನಾ ಗ್ರಾಮದ ಮಧ್ಯೆ ಬರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಮುಂದಾಗಿತ್ತು. ಇದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

Vasana village people protest against administration about to workers quarantine
ಕಾರ್ಮಿಕರ ಕ್ವಾರಂಟೈನ್​ಗೆ ವಿರೋಧ

By

Published : May 22, 2020, 11:41 AM IST

ದಾವಣಗೆರೆ: ಕಾರ್ಮಿಕರನ್ನು ಕ್ವಾರಂಟೈನ್ ಮಾಡಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ಹರಿಹರ ತಾಲೂಕಿನ ನಂದಿಗುಡಿ ಹಾಗೂ ವಾಸನಾ ಗ್ರಾಮದಲ್ಲಿ ನಡೆದಿದೆ.

ಮುಂಬೈನಿಂದ ಬಂದಿದ್ದ 16 ಜನರನ್ನು ನಂದಿಗುಡಿ ಹಾಗೂ ವಾಸನಾ ಗ್ರಾಮದ ಮಧ್ಯೆ ಬರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಮುಂದಾಗಿತ್ತು. ಇದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರೆಲ್ಲರೂ ಒಟ್ಟಾಗಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ವಾಹನಗಳನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಕ್ವಾರಂಟೈನ್ ಮಾಡಲು ಬಿಡುವುದಿಲ್ಲ. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರು ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು.

ABOUT THE AUTHOR

...view details