ಕರ್ನಾಟಕ

karnataka

ETV Bharat / state

ರಾಮಾಯಣದ ಸಾರ ಯುವಜನತೆಗೆ ದಾರಿ ದೀಪವಾಗಲಿ.. ಮಾಜಿ ಶಾಸಕ ಬಿ.ಪಿ ಹರೀಶ್ - Harihara Taluk Rajanahalli Valmiki Mat

ಹರಿಹರ ತಾಲೂಕು ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ವಾಲ್ಮೀಕಿ ಮಹರ್ಷಿಯ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು. ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡು ವಾಲ್ಮೀಕಿ ಮಹರ್ಷಿ ಮತ್ತು ರಾಮಾಯಣದ ಬಗ್ಗೆ ಉಪನ್ಯಾಸ ನೀಡಿದರು.

ವಾಲ್ಮಿಕಿ ಜಯಂತಿ ಆಚರಣೆ ನಡೆಯಿತು

By

Published : Oct 13, 2019, 11:24 PM IST

Updated : Oct 14, 2019, 10:15 AM IST

ದಾವಣಗೆರೆ: ವಾಲ್ಮೀಕಿ ರಚಿಸಿದ ಮಹಾಕಾವ್ಯ ರಾಮಾಯಣದ ಪ್ರತಿಯೊಂದು ಸಾರವನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಮಹಾತ್ಮರ ಜಯಂತಿಗೆ ನಿಜವಾದ ಅರ್ಥ ಬರಲಿದೆ ಎಂದು ಮಾಜಿ ಶಾಸಕ ಬಿ.ಪಿ ಹರೀಶ್ ಹೇಳಿದರು.

ಹರಿಹರ ತಾಲೂಕು ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆದ ವಾಲ್ಮೀಕಿ ಮಹರ್ಷಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಸಮಾಜ ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರಗತಿ ಸಾಧಿಸಲು ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಆದ ಕಾರಣ ಶಿಕ್ಷಣಕ್ಕೆ ಒತ್ತು ನೀಡುವುದರ ಮೂಲಕ ಸರ್ವತೊಮುಖ ಅಭಿವೃದ್ದಿಗೆ ಶ್ರಮಿಸಬೇಕು ಎಂದರು.

ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ..

ಮಾಜಿ ಶಾಸಕ ಎಚ್.ಎಸ್ ಶಿವಶಂಕರ್ ಮಾತನಾಡಿ, ವಾಲ್ಮೀಕಿ ಸಮಾಜದವರು ಜನ್ಮತಃ ನಾಯಕರಾದವರು. ಆದರೆ, ರಾಜಕಾರಿಣಿಗಳು ಕಾಯಕದ ಮೂಲಕ ನಾಯಕರಾದವರು. ಶ್ರೀ ವಾಲ್ಮೀಕಿ ಪರಿವರ್ತನೆಯ ದಾರಿ ತೊರಿಸಿದವರು. ಅವರ ಕಲ್ಪನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಪರಿವರ್ತನೆಗೊಂಡಾಗ ಮೃಗತ್ವದಿಂದ ಮನುಷ್ಯತ್ವದ ಕಡೆಗೆ ಬರುತ್ತೇವೆ ಎಂದು ಹೇಳಿದರು. ಉಪನ್ಯಾಸಕ ಟಿ.ಆರ್ ರಂಗನಾಥ್ ಮಾತನಾಡಿ, ವಾಲ್ಮೀಕಿ ರಚಿಸಿದ ಮಹಾಕಾವ್ಯವು ಜಗತ್ತಿನ 300 ಭಾಷೆಯಲ್ಲಿ ಭಾಷಾಂತರವಾಗಿವುದು ಈ ಕಾವ್ಯದ ಮಹತ್ವವನ್ನು ತಿಳಿಸುತ್ತಿದೆ. ರಾಮಾಯಣ ಭಾರತದ ಇತಿಹಾಸದ ಪ್ರತೀಕವಾಗಿದ್ದು ಅದನ್ನ ಮರೆತರೆ ಭಾರತವನ್ನು ಮರೆತಂತೆ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ನಗರಸಭಾ ಸದಸ್ಯ ದಿನೇಶ್ ಬಾಬು, ವಾಲ್ಮೀಕಿ ಸಮಾಜದ ಗ್ರಾಮಾಂತರ ಅಧ್ಯಕ್ಷ ಜಿಗಳಿ ರಂಗಪ್ಪ, ನಗರ ಅಧ್ಯಕ್ಷ ಕೆ.ಬಿ.ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

Last Updated : Oct 14, 2019, 10:15 AM IST

ABOUT THE AUTHOR

...view details