ಕರ್ನಾಟಕ

karnataka

ETV Bharat / state

ಆನೆ ಕೆಸರಿನಲ್ಲಿ ಸಿಲುಕಿದೆ ತಾನಾಗಿಯೇ ಹೊರಬರಬೇಕು: ವಚನಾನಂದ ಶ್ರೀ ಮಾರ್ಮಿಕ ನುಡಿ - Vachanananda Swamiji talk about,

ಪಂಚಮಸಾಲಿ ಸಮಾಜ ಉತ್ತರೋತ್ತರವಾಗಿ ಬೆಳೆಯಲಿ ಎಂದು ವಚನಾನಂದ ಸ್ವಾಮೀಜಿ ಹರ ಜಾತ್ರೆಯಲ್ಲಿ ಹೇಳಿದರು.

Vachanananda Swamiji. Vachanananda Swamiji talk about, Vachanananda Swamiji talk about Panchamasaali society, Hara fair, Hara fair at Harihara, Hara fair news, ವಚನಾನಂದ ಸ್ವಾಮೀಜಿ, ಮಾತನಾಡಿದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜ ಬಗ್ಗೆ ಮಾತನಾಡಿದ ವಚನಾನಂದ ಸ್ವಾಮೀಜಿ, ಹರ ಜಾತ್ರೆ, ಹರಿಹರದಲ್ಲಿ ಹರ ಜಾತ್ರೆ, ಹರ ಜಾತ್ರೆ ಸುದ್ದಿ,
ಪಂಚಮಸಾಲಿ ಸಮಾಜ ಉತ್ತರೋತ್ತರವಾಗಿ ಬೆಳೆಯಲಿ

By

Published : Jan 15, 2020, 8:59 PM IST

ಹರಿಹರ: ಆನೆ ಕೆಸರಿನಲ್ಲಿ ಸಿಲುಕಿದರೆ ಯಾರಿಂದಲೂ ಹೊರ ತರಲು ಸಾಧ್ಯವಿಲ್ಲ, ಆನೆಯೇ ಸ್ವಯಂ ಶಕ್ತಿಯಿಂದ ಹೊರಬರಬೇಕು ಎಂದು ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ವಚನಾನಂದ ಮಹಾಸ್ವಾಮಿ ಮಾರ್ಮಿಕವಾಗಿ ನುಡಿದರು.

ಆನೆಯಂತೆ ಪಂಚಮಸಾಲಿ ಸಮಾಜ ಕೆಸರಿನಲ್ಲಿ ಸಿಲುಕಿದೆ ಕೆಸರಿನಿಂದ ಯಾರು ನಮ್ಮನ್ನು ಹೊರತರುವುದಿಲ್ಲ ನಾವೇ ಎದ್ದೇಳಬೇಕು ಎಂದು ಭಕ್ತರಿಗೆ ಶ್ರೀಗಳು ತಿಳಿಸಿದರು.

ಪಂಚಮಸಾಲಿ ಸಮಾಜ ಉತ್ತರೋತ್ತರವಾಗಿ ಬೆಳೆಯಲಿ

ತಾಲೂಕಿನ ಹನಗವಾಡಿ ಗ್ರಾಮದ ಹೊರವಲಯದಲ್ಲಿರುವ ವೀರಶೈವ ಲಿಂಗಾಯಿತಿ ಪಂಚಮಸಾಲಿ ಪೀಠದಲ್ಲಿ ಹಮ್ಮಿಕೊಂಡಿದ್ದ ಹರ ಜಾತ್ರೆ, ಬೆಳ್ಳಿ ಬೆಡಗು ಎರಡನೇ ದಿನದ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಈ ಮೇಲಿನ ಮಾತು ಹೇಳಿದರು. ಬಳಿಕ ಮಾತನಾಡಿದ ಅವರು, ಇಂದು ಮಕರ ಸಂಕ್ರಾತಿ ಹಬ್ಬ, ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸಿದಂತೆ ನಮ್ಮ ಸಮಾಜವೂ ಸಹ ಉತ್ತರೋತ್ತರವಾಗಿ ಬೆಳೆಯಬೇಕು. ನಾನು ದೇಶ ವಿದೇಶದಲ್ಲಿನ ಜನರಿಗೆ ಯೋಗವನ್ನು ಕಲಿಸಿದ್ದೇನೆ. ಅದೇ ರೀತಿ ಈ ಪೀಠ ಪಂಚ ಸೇವೆಯನ್ನು ನೀಡಬೇಕು. ಇಂದು ಹರ ಜಾತ್ರೆ ಮುಕ್ತಾಯವಾಗುವುದು. ಇದು ಸಾಂಕೇತಿಕ ಮಾತ್ರ. ಆದರೆ ನಮ್ಮ ಸಮಾಜ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದುವರೆಯಬೇಕು ಎಂದರು.

ಶ್ರೀ ಶಿವಮೂರ್ತಿ ಶಿವಚಾರ್ಯ ಸ್ವಾಮಿಜಿ ಹೇಳಿದ್ದೇನು?
ಎಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತದೆಯೋ ಅಲ್ಲಿ ದೇವಾನು ದೇವತೆಗಳು ನೆಲೆಸುತ್ತಾರೆ. ಈ ನಿಟ್ಟಿನಲ್ಲಿ ನಾವು ಮಹಿಳೆಯರಿಗೆ ಗೌರವ ಕೊಡಬೇಕು ಎಂದು ತರಳಬಾಳು ಮಠದ ಪೀಠಧಿಪತಿ ಶ್ರೀ ಶಿವಮೂರ್ತಿ ಶಿವಚಾರ್ಯ ಮಹಸಾಸ್ವಾಮೀಜಿ ನುಡಿದರು.

ಮನೆಯಲ್ಲಿ ಯಾವುದೇ ಕಾರ್ಯಗಳು ನಿಂತರೆ ಹೊಸದಾಗಿ ಬಂದ ಸೊಸೆಯನ್ನು ದೂಷಿಸುತ್ತೇವೆ. ಶುಭ ಕಾರ್ಯದಲ್ಲಿ ವಿಧವೆಯರನ್ನು ದೂರ ಹಿಡುತ್ತೇವೆ. ಇದು ತಪ್ಪು.
ಒಂದು ಕಾರ್ಯಕ್ರಮಕ್ಕೆ ವಿಧವೆ ತೆರಳಿದಾಗ ಅವಳನ್ನು ಹಿರಿಯರು ದೂಷಿಸುತ್ತಾರೆ. ಅದೇ ಸಮಾಜದ, ಪ್ರಧಾನಿ ಇಂದಿರಾ ಗಾಂಧಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ. ಅವಳು ವಿಧವೆಯಲ್ಲವೇ. ಮನೆಯಲ್ಲಿ ಗುರು ಹಿರಿಯರು ಮಹಿಳೆಯರನ್ನು ನಿಂಧಿಸದೆ ಅವಳನ್ನು ಗೌರವಿಸಿ ಎಂದರು.

ABOUT THE AUTHOR

...view details