ದಾವಣಗೆರೆ: ಭಾರತ ಹಿಂದೆ ಹಾವಾಡಿಗರ ದೇಶವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಬಂದ ಮೇಲೆ ಹಿಂದೂ ಸನಾತನ ಧರ್ಮ ಪ್ರಚಾರಕ್ಕೆ ಬಂದಿದೆ ಎಂದು ಹರಿಹರದ ಪಂಚಮಸಾಲಿ ಗುರುಪೀಠದ ಪೀಠಾಧ್ಯಕ್ಷ ವಚನಾನಂದ ಶ್ರೀಗಳು ಹೇಳಿದರು.
ಜಿಲ್ಲೆಯ ಹರಿಹರ ನಗರದಲ್ಲಿ ನಡೆದ ತುಂಗಭದ್ರಾ ಆರತಿ ಸಮಾರಂಭದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನಿರ್ಧಾರದಿಂದ ಗಂಗಾ ನದಿ ಶುದ್ಧವಾಗಿದೆ. ಈಗ ಗಂಗೆ ಪರಿಶುದ್ಧಳಾಗಿದ್ದಾಳೆ. ಪ್ರಧಾನಿ ನರೇಂದ್ರ ಮೋದಿ ನಮಗೆ ಒಂದು ರೀತಿಯಲ್ಲಿ ಸ್ಫೂರ್ತಿ ಆಗಿದ್ದಾರೆ. ವಿದೇಶದಲ್ಲಿ ಭಾರತವನ್ನ ನೋಡುವ ದೃಷ್ಠಿಕೋನ ಬದಲಾಗಿದೆ. ಇದಕ್ಕೆ ಕಾರಣ ನರೇಂದ್ರ ಮೋದಿ ಎಂದು ಬಣ್ಣಿಸಿದರು.
ಪಂಚಮಸಾಲಿ ಗುರುಪೀಠದ ಪೀಠಾಧ್ಯಕ್ಷ ವಚನಾನಂದ ಶ್ರೀ ಮೋದಿ ಅವರ ಭವ್ಯ ದಿವ್ಯ ಎಂದು 900 ಕೋಟಿ ರೂಪಾಯಿಯನ್ನು ಗಂಗಾ ನದಿ ತಟಕ್ಕೆ ವೆಚ್ಚ ಮಾಡಿದ್ದಾರೆ. ಇದೇ ರೀತಿ ಹರಿಹರ ಅಭಿವೃದ್ಧಿಪಡಿಸಲು ಬೇಕು ಎಂದು ಸಿಎಂಗೆ ಸ್ವಾಮೀಜಿ ಆಗ್ರಹಿಸಿದರು. ಧ್ಯಾನ ಮಾಡುವ ವೇಳೆ ಸಾವಿರಾರು ಜನ ತುಂಗಭದ್ರಾರತಿಯನ್ನು ಬೆಳಕಿನ ರೀತಿಯಲ್ಲಿ ಮಾಡುತ್ತಿರುವ ಒಂದು ಬೆಳಕು ಬಂದು ಹೋಗಿದ್ದ ಸಂಗತಿ ನಡೆದಿತ್ತು. ತುಂಗಭದ್ರಾ ನದಿಯನ್ನು ಸ್ವಚ್ಛ ಮಾಡ್ಬೇಕೆಂಬ ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.
ನಾವು ಗಂಗಾರತಿಯನ್ನು ಮಾಡುತ್ತ ಬೆಳೆದವರು, ಯಾವ ಜನ್ಮದ ಪುಣ್ಯನೋ ಗಂಗೆ ತುಂಗಭದ್ರೆ ಬಳಿ ಕಳುಹಿಸಿದ್ದಾಳೆ. ಇಲ್ಲೂ ಕೂಡ ತುಂಗಭದ್ರಾ ಆರತಿ ಜರುಗಲಿದ್ದು, ಹರಿಹರದ ಗತವೈಭವ ಮರುಕಳುಹಿಸಲಿದೆ ಎಂದರು.
ಓದಿ:ಈಶ್ವರಪ್ಪ ರಾಷ್ಟ್ರದ್ರೋಹಿ ಅಲ್ಲ- ಮೇಕೆದಾಟು ಪಾದಯಾತ್ರೆಯಿಂದ ಪ್ರಯೋಜನವಿಲ್ಲ : ವಾಟಾಳ್ ನಾಗರಾಜ್