ದಾವಣಗೆರೆ: ಕೊರೊನಾ ಹಿನ್ನೆಲೆ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಬಾತಿ ಗ್ರಾಮದ ಚಮನ್ ಷಾ ವಲಿ ದರ್ಗಾದ ಉರುಸ್ ಸರಳವಾಗಿ ಆಚರಿಸಲು ಜಿಲ್ಲಾಡಳಿತ ಸೂಚಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕೊರೊನಾ ಇರುವ ಕಾರಣ ಉರುಸ್ ಸರಳವಾಗಿ ಆಚರಣೆ ಮಾಡುವುದರೊಂದಿಗೆ ಅಂಗಡಿ ಹಾಕಲು ಅವಕಾಶ ಇಲ್ಲ ಎಂದು ತಿಳಿಸಿದರು.
ಕೊರೊನಾ ನಡುವೆ ಭಾವೈಕ್ಯತೆಯ ಉರುಸ್: ಸರಳ ಆಚರಣೆಗೆ ಡಿಸಿ ಸೂಚನೆ
ಕೊರೊನಾ ಇರುವ ಕಾರಣ ಉರುಸ್ಅನ್ನು ಸರಳವಾಗಿ ಆಚರಣೆ ಮಾಡುವುವಂತೆ ಸೂಚಿಸಲಾಗಿದೆ. ಧರ್ಮ ಭೇದ ಮರೆತು ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗುತ್ತಿದ್ದರು. ಈ ಹಿನ್ನೆಲೆ ಸಾಕಷ್ಟು ಜನ ಸೇರದಂತೆ ನೋಡಿಕೊಳ್ಳುಲು ಈ ಕ್ರಮ ತೆಗೆದುಕೊಂಡಿದ್ದು, ಅದಕ್ಕೆಲ್ಲ ಕಡಿವಾಣ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಉರುಸ್ ಮುನ್ನ ದರ್ಗಾಕ್ಕೆ ಗಂಧ ಎರಚಿ ಸರಳವಾಗಿ ಆಚರಣೆ ಮಾಡುವಂತೆ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿ ಆದೇಶಿಸಲಾಗಿದೆ ಎಂದರು. ಅತ್ಯಂತ ಸರಳವಾಗಿ ಉರುಸ್ ಆಚರಣೆ ಮಾಡುವಂತೆಯೂ ಮನವಿ ಮಾಡಿಕೊಂಡಿದ್ದೇವೆ. ಧರ್ಮ ಭೇದ ಮರೆತು ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗುತ್ತಿದ್ದರು. ಈ ಹಿನ್ನೆಲೆ ಸಾಕಷ್ಟು ಜನ ಸೇರದಂತೆ ನೋಡಿಕೊಳ್ಳಲು ಈ ಕ್ರಮ ತೆಗೆದುಕೊಂಡಿದ್ದು, ಅದಕ್ಕೆಲ್ಲ ಕಡಿವಾಣ ಹಾಕಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ:ಡಿ.30 ಮತ್ತು 31 ರಂದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ : ದಾವಣಗೆರೆ ಜಿಲ್ಲಾಧಿಕಾರಿ ಆದೇಶ