ದಾವಣಗೆರೆ: ಬಿಜೆಪಿ ಸರ್ಕಾರದ ಮತ್ತಷ್ಟು ಹಗರಣಗಳ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಎಲ್ಲಾ ಇಲಾಖೆಗಳಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಇವುಗಳನ್ನು ಬಯಲಿಗೆ ಳೆಯುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೊಸ ತಿಳಿಸಿದ್ದಾರೆ.
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ನಗರದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಹಾಗೂ ಪೊಲೀಸರ ಮೂಲಕ ಬಿಜೆಪಿಯವರು ಹಾಕುವ ಬೆದರಿಕೆಗೆ ಹೆದರುವುದಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಗುಂಡುಗಳಿಗೆ ಎದೆಕೊಟ್ಟ ಪಕ್ಷ ನಮ್ಮದು. ಇಂಥ ಬೆದರಿಕೆಗಳ ಮೂಲಕ ನಮ್ಮ ಧ್ವನಿ ಅಡಗಿಸಲು ಆಗದು ಎಂದು ಹೇಳಿದರು.
ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರರ ಭ್ರಷ್ಟಾಚಾರವನ್ನು ಬ್ಲಾಸ್ಟ್ ಮಾಡಿದ್ದು ನಾನೇ. ನಾನು ಹಾಗೂ 15 ಮಾಧ್ಯಮ ಸಂಸ್ಥೆಗಳಿಗೆ ದೇವನಹಳ್ಳಿ ಕೋರ್ಟ್ನಿಂದ ಈ ವಿಚಾರದ ಬಗ್ಗೆ ಮಾತನಾಡದಂತೆ ತಡೆಯಾಜ್ಞೆ ತಂದಿದ್ದಾರೆ. ಹೈಕೋರ್ಟ್ನಲ್ಲಿ ನಾವು ಸಹ ಈ ತಡೆಯಾಜ್ಞೆ ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದೇವೆ. ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದರು.
ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಮೂರು ಎಫ್ಐಆರ್ ದಾಖಲಾಗಿದೆ. ಈ ಪ್ರತಿಗಳನ್ನು ಪೊಲೀಸರು ಕಳುಹಿಸಿಕೊಟ್ಟಿದ್ದಾರೆ. ವಿಜಯೇಂದ್ರರ ಬೆದರಿಕೆಗೆ ಜಗ್ಗುವುದಿಲ್ಲ. ಈ ಬಗ್ಗೆ ರಾಜ್ಯ ನಾಯಕರು ಮಾತ್ರವಲ್ಲ, ಕೇಂದ್ರ ನಾಯಕರು ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.