ದಾವಣಗೆರೆ : ಇಲ್ಲಿನ ಬಡಾವಣೆ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ದಾಖಲೆ ಇಲ್ಲದ 102 ಕೆಜಿ ಬೆಳ್ಳಿಯ ಕಾಲು ಚೈನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಸೇಲಂನಿಂದ ದಾವಣಗೆರೆಗೆ ಬೆಳ್ಳಿ ಚೈನ್ಗಳನ್ನು ತರಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಡಾವಣೆ ಠಾಣಾ ಪೊಲೀಸರು ಒಟ್ಟು 102 ಕೆಜಿಯಷ್ಟು ದಾಖಲೆ ಇಲ್ಲದೆ ಬೆಳ್ಳಿ ಚೈನ್ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ತಮಿಳುನಾಡಿನ ಸೇಲಂ ಮೂಲದ ಸೆಲ್ವಂ ಹಾಗು ಬಾಲಾಜಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
102 ಕೆಜಿ ಬೆಳ್ಳಿ ಕಾಲು ಚೈನ್ ವಶ, ಕೋಟಿಗಟ್ಟಲೇ ದಂಡ ಸಂಗ್ರಹಿಸಿದ ದಾವಣಗೆರೆ ಸಂಚಾರಿ ಪೊಲೀಸರು ದಾಖಲೆ ಇಲ್ಲದ ಬೆಳ್ಳಿ ಕಾಲು ಚೈನ್ಗಳು ಕಳ್ಳತನವಾಗಿರುವುದೇ, ದಾವಣಗೆರೆಯಲ್ಲಿ ಯಾರಿಗೆ ಮಾರಾಟ ಮಾಡುತ್ತಿದ್ದರು ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪೊಲೀಸರ ಈ ಕಾರ್ಯಾಚರಣೆಗೆ ಅಭಿನಂದನೆ ಸಲ್ಲಿಸಿದ ಎಸ್.ಪಿ ಸಿ.ಬಿ ರಿಷ್ಯಂತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗೆ ಬಹುಮಾನ ವಿತರಣೆ ಮಾಡಿದರು.
1 ಕೋಟಿ 3 ಲಕ್ಷ ದಂಡ ಸಂಗ್ರಹಿಸಿದ ಸಂಚಾರಿ ಪೋಲಿಸರು : ದಾವಣಗೆರೆ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದ ವಾಹನ ಸವಾರರ ಮೇಲೆ ದಂಡ ವಿಧಿಸಿದ್ದು, ದಾವಣಗೆರೆ ಜಿಲ್ಲಾ ಸಂಚಾರಿ ಪೊಲೀಸರು ಕಳೆದ ಆರು ತಿಂಗಳಲ್ಲಿ ಒಟ್ಟು 25,088 ಕೇಸ್ ಗಳಲ್ಲಿ 1 ಕೋಟಿ 3 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ. ಇದಲ್ಲದೆ 83 ತ್ರಿಬಲ್ ರೈಡಿಂಗ್, 76 ರ್ಯಾಶ್ ಡ್ರೈವಿಂಗ್ ನಲ್ಲಿ ಲೈಸೆನ್ಸ್ ಕ್ಯಾನ್ಸಲ್, 52 ಡಿಫೆಕ್ಟಿವ್ ಸೈಲೆನ್ಸರ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸವಾರರಿಂದ ದಂಡ ವಸೂಲಿ ಮಾಡಲಾಗಿದೆ. ಇದಲ್ಲದೆ ದಾವಣಗೆರೆ ನಗರದಲ್ಲಿ ಕರ್ಕಶವಾಗಿ ಶಬ್ದ ಮಾಡುತ್ತಿದ್ದ 52 ಸೈಲೆನ್ಸರ್ ಪೈಪ್ಗಳನ್ನು ವಶಕ್ಕೆ ಪಡೆದು ಎಸ್.ಪಿ ಸಿ.ಬಿ ರಿಷ್ಯಂತ್ ಸಮ್ಮುಖದಲ್ಲಿ ರೋಲರ್ ಹತ್ತಿಸುವ ಮೂಲಕ ನಾಶ ಪಡಿಸಲಾಯಿತು. ಸಂಚಾರಿ ಠಾಣೆ ಪೊಲೀಸರ ಈ ಸಾಧನೆಗೆ ಎಸ್ ಪಿ ಸಿ ಬಿ ರಿಷ್ಯಂತ್ ಅಭಿನಂಧನೆ ತಿಳಿಸಿದ್ದಾರೆ.
ಓದಿ :ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ: ತನಿಖೆಗೆ ಐದು ತಂಡ ರಚನೆ- ಪೊಲೀಸ್ ಆಯುಕ್ತ ಲಾಬೂರಾಮ್