ಕರ್ನಾಟಕ

karnataka

ಬೆಣ್ಣೆನಗರಿಯಲ್ಲಿ ಎರಡು ಲಕ್ಷ ಮೌಲ್ಯದ ಗಾಂಜಾ ವಶಕ್ಕೆ, ಇಬ್ಬರ ಬಂಧನ

ಇಬ್ಬರು ಅಂತಾರಾಜ್ಯ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾವಣಗೆರೆ ಸಿಇಎನ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

By

Published : Apr 4, 2021, 3:11 AM IST

Published : Apr 4, 2021, 3:11 AM IST

two-lakh-worth-marijuana-seized-and-two-arrested
ಗಾಂಜಾ ವಶಕ್ಕೆ

ದಾವಣಗೆರೆ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ದಾವಣಗೆರೆ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಂತರಾಮ್ ತರ್ಕಿ(21) ಹಾಗೂ ಮಧುರಾಜ್(40) ಬಂಧಿತ ಆರೋಪಿಗಳು. ಬಂಧಿತರಿಂದ 2.10 ಲಕ್ಷ ರೂ. ಮೌಲ್ಯದ 8 ಕೆಜಿ 600 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.

ದಾವಣಗೆರೆ ನಗರದ ಬಾಡಾ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುವಾಗ ಸಿಇಎನ್ ಪೊಲೀಸರು ದಾಳಿ ನಡೆಸಿದ್ದಾರೆ. ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಪತ್ನಿ, ಅಳಿಯನ ಮೇಲಿನ ದ್ವೇಷಕ್ಕೆ ರಾಕ್ಷಸಿ ಕೃತ್ಯ..ಮಲಗಿದ್ದ 6 ಜೀವಗಳನ್ನ ಜೀವಂತ ಸುಟ್ಟ ನರಹಂತಕ..

ABOUT THE AUTHOR

...view details