ದಾವಣಗೆರೆ:ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿ ಬಳಿಕ ಹಿಂದಿನಿಂದ ಬಂದ ಲಾರಿ ರಸ್ತೆ ಮೇಲೆ ಬಿದ್ದವರ ಮೇಲೆ ಹರಿದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ತ್ಯಾವಣಿಗೆ ಸಮೀಪದ ಕದರನಹಳ್ಳಿ ಕ್ರಾಸ್ ಬಳಿ ನಡೆದಿದೆ.
ಕದರನಹಳ್ಳಿ ಕ್ರಾಸ್ ಬಳಿ ಬೈಕ್ಗಳ ನಡುವೆ ಡಿಕ್ಕಿ: ಇಬ್ಬರು ಸಾವು - ಹದಡಿ
ದಾವಣಗೆರೆಯಿಂದ ತ್ಯಾವಣಿಗೆ ಕಡೆ ಹೋಗುತ್ತಿದ್ದ ಬೈಕ್ ಹಾಗೂ ಎದುರಿನಿಂದ ಬಂದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಎದುರಿನ ಬೈಕ್‌ನವರು ರಸ್ತೆಯ ಬದಿಗೆ ಬಿದ್ದರೆ, ಇನ್ನಿಬ್ಬರು ರಸ್ತೆಯ ಮೇಲೆ ಬಿದ್ದಿದ್ದಾರೆ.
ಮಿಯಾಪುರ ಗ್ರಾಮದ ಅಂಜಿನಪ್ಪ(29) ಮತ್ತು ಮನೋಜ್ (19) ಸಾವನ್ನಪ್ಪಿದ ದುರ್ದೈವಿಗಳು ಎಂದು ತಿಳಿದು ಬಂದಿದೆ. ದಾವಣಗೆರೆಯಿಂದ ತ್ಯಾವಣಿಗೆ ಕಡೆ ಹೋಗುತ್ತಿದ್ದ ಬೈಕ್ ಹಾಗೂ ಎದುರಿನಿಂದ ಬಂದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಎದುರಿನ ಬೈಕ್‌ನವರು ರಸ್ತೆಯ ಬದಿಗೆ ಬಿದ್ದರೆ, ಇನ್ನಿಬ್ಬರು ರಸ್ತೆಯ ಮೇಲೆ ಬಿದ್ದಿದ್ದಾರೆ. ಅದೇ ಸಮಯದಲ್ಲಿ ಬಂದ ಲಾರಿ ರಸ್ತೆ ಮೇಲೆ ಬಿದ್ದವರ ಮೇಲೆ ಹರಿದಿದೆ ಎನ್ನಲಾಗಿದೆ. ಪರಿಣಾಮ ಸ್ಥಳದಲ್ಲೇ ಒಬ್ಬ ಮೃತಪಟ್ಟಿದ್ದು, ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.
ಕೆಲಕಾಲ ಗಾಯಳು ರಸ್ತೆಯಲ್ಲೇ ನರಳಿದ್ದು, ಆಸ್ಪತ್ರೆಗೆ ಕರೆದೊಯ್ಯುಲು ವಾಹನ ಸಿಗದೆ ಪರದಾಟ ಅನುಭವಿಸಿದ್ದಾರೆ. ಇನ್ನಿಬ್ಬರು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.