ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಎರಡು ಕುದುರೆಗಳನ್ನು ನೀಡಿದ್ದು, ನಗರದಿಂದ ಮೈಸೂರಿಗೆ ಲಾರಿ ಮೂಲಕ ಕೊಂಡೊಯ್ಯಲಾಯಿತು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಫಾರಂ ಸೇರಿದ ಬಾರೊಕ್ ಪಿಂಟೋ ಕುದುರೆಗಳು - challanging star darshan
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ನಟ ದರ್ಶನ್ಗೆ ಎರಡು ಕುದುರೆಗಳನ್ನು ನೀಡಿದ್ದಾರೆ.
ನಟ ದರ್ಶನ್ ಫಾರಂ ಹೌಸ್ ಸೇರಿದ ಕುದುರೆಗಳು
ಕಳೆದ ಎರಡು ದಿನಗಳ ಹಿಂದೆ ದಾವಣಗೆರೆಗೆ ಆಗಮಿಸಿದ್ದ ನಟ ದರ್ಶನ್, ದುಗ್ಗತ್ತಿ ಹಾಗೂ ಕಲ್ಲೇಶ್ವರ ರೈಸ್ ಮಿಲ್ಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಕುದುರೆಗಳು, ಹಸು, ಕರುಗಳನ್ನು ವೀಕ್ಷಿಸಿದರು.
ಮೂರ್ನಾಲ್ಕು ತಿಂಗಳ ನೆದರ್ಲ್ಯಾಂಡ್ ಮೂಲದ ಬಾರೊಕ್ ಪಿಂಟೋ ಕುದುರೆ ಮರಿಗಳನ್ನು ದರ್ಶನ್ ಇಷ್ಟಪಟ್ಟಿದ್ದರು. ಮಲ್ಲಿಕಾರ್ಜುನ್ ಪ್ರೀತಿಯಿಂದ ಉಚಿತವಾಗಿ ನೀಡಿದ್ದಾರೆ ಎಂದು ಸ್ವತಃ ದರ್ಶನ್ ಅವರೇ ತಿಳಿಸಿದರು. ಈ ಎರಡು ಮರಿಗಳನ್ನು ಮೈಸೂರಿನಲ್ಲಿರುವ ದರ್ಶನ್ ಫಾರಂ ಹೌಸ್ಗೆ ಕುದುರೆಗಳನ್ನು ತೆಗೆದುಕೊಂಡು ಹೋಗಲಾಗಿದೆ.