ದಾವಣಗೆರೆ: ಲಾರಿ ಮತ್ತು ಓಮ್ನಿ ನಡುವೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ಬಳಿ ಸಂಭವಿಸಿದೆ. ಜಾಬೀರ್ (40) ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಯೂಸುಫ್(45) ಚಿಕಿತ್ಸೆ ಫಲಿಸದೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಚನ್ನಗಿರಿ ಬಳಿ ಓಮ್ನಿ - ಲಾರಿ ಮಧ್ಯೆ ಡಿಕ್ಕಿ: ಇಬ್ಬರು ದುರ್ಮರಣ - ದಾವಣಗೆರೆ ಅಪಘಾತ ಸುದ್ದಿ
ಓಮ್ನಿ ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ಚನ್ನಗಿರಿ ತಾಲೂಕಿನಲ್ಲಿ ನಡೆದಿದೆ.
accident
ಮೃತರಿಬ್ಬರು ಓಮ್ನಿ ಕಾರಿನಲ್ಲಿ ಚನ್ನಗಿರಿಯಿಂದ ಬೀರೂರು ಕಡೆಗೆ ಬರುತ್ತಿದ್ದರು. ಈ ವೇಳೆ ಬೀರೂರು ಕಡೆಯಿಂದ ಬರುತ್ತಿದ್ದ ಲಾರಿ ಮತ್ತು ಓಮ್ನಿ ಮಧ್ಯೆ ಡಿಕ್ಕಿ ಸಂಭವಿಸಿದೆ.
ಚನ್ನಗಿರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.