ದಾವಣಗೆರೆ: ಈಜಲು ಹೋದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮಾಳಮ್ಮನಹಳ್ಳಿ ಹುಚ್ಚಪ್ಪನಕಟ್ಟೆಯಲ್ಲಿ ನಡೆದಿದೆ.
ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು - two boys dies in lake
ಈಜಲು ಹೋಗಿ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮಾಳಮ್ಮನಹಳ್ಳಿ ಹುಚ್ಚಪ್ಪನಕಟ್ಟೆಯಲ್ಲಿ ನಡೆದಿದೆ
ಬಾಲಕರು ನೀರು ಪಾಲು
ಜಗಳೂರಿನ ಅಶ್ವತ್‌ರೆಡ್ಡಿ ನಗರದ ಮಧು (14), ಮನು (12) ಮೃತ ಬಾಲಕರು ಎಂದು ಗುರುತಿಸಲಾಗಿದೆ. ಮೂವರು ಬಾಲಕರು ಹುಚ್ಚಪ್ಪನಕಟ್ಟೆಯಲ್ಲಿ ಈಜಾಡಲು ಹೋಗಿದ್ದರು ಎನ್ನಲಾಗಿದ್ದು, ಈ ಪೈಕಿ ಮಧು, ಮನು ಎಂಬ ಬಾಲಕರು ನೀರು ಪಾಲಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಸಿಬ್ಬಂದಿ ಶವಗಳನ್ನು ಮೇಲೆತ್ತಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.