ಕರ್ನಾಟಕ

karnataka

ಜಗಳೂರಿನ ಜನತೆಗೆ ಸಿಹಿ ಸುದ್ದಿ.. ವರ್ಷಾಂತ್ಯಕ್ಕೆ 57 ಕೆರೆಗೆ ಹರಿಯಲಿದ್ದಾಳೆ ತುಂಗಭದ್ರೆ..

By

Published : Feb 16, 2021, 9:08 PM IST

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ದೀಟೂರು ಗ್ರಾಮದ ಬಳಿ ಹಾದು ಹೋಗಿರುವ ತುಂಗಭದ್ರಾ ನದಿ ಬಳಿ ಬೃಹತ್ ಆಕಾರದ ಜ್ಯಾಕ್ ವೆಲ್ ಮೂಲಕ ಜಗಳೂರಿನ 57 ಕೆರೆಗಳಿಗೆ ನೀರು ಪೂರೈಸಲು ಕಾಮಗಾರಿ ಆರಂಭಿಸಿದೆ.

tunga bhadra river coming to jagaluru taluk
ಜಗಳೂರಿನ ಜನತೆಗೆ ಸಿಹಿ ಸುದ್ದಿ

ದಾವಣಗೆರೆ :ಬರಪೀಡಿತ ತಾಲೂಕು ಜಗಳೂರಿನ ಜನತೆಗೆ ಸಿಹಿ ಸುದ್ದಿವೊಂದಿದೆ. ತಾಲೂಕಿನ 57 ಕೆರೆಗಳಿಗೆ ತುಂಗಾಭದ್ರೆ ಹರಿಯಲಿದ್ದಾಳೆ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಈ ವರ್ಷಾಂತ್ಯಕ್ಕೆ ಕೆರೆಗಳಿಗೆ ನೀರು ಹರಿಯಲಿದೆ.

ಜಗಳೂರಿನ ಜನತೆಗೆ ಸಿಹಿ ಸುದ್ದಿ..

ಓದಿ: ಮಗಳ ಸಿನಿ ಎಂಟ್ರಿ ಬಗ್ಗೆ ಸುಧಾರಾಣಿ ಪ್ರತಿಕ್ರಿಯೆ... ಬಣ್ಣದ ಲೋಕಕ್ಕೆ ಎಂಟ್ರಿ ನೀಡ್ತಾರಾ ನಿಧಿ!?

ಬರದನಾಡು ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿಗೆ ತುಂಗಾಭದ್ರೆ ಹರಿಯಲ್ಲಿದ್ದಾಳೆ. ಸರ್ಕಾರ ಈ ಭಾಗದ ರೈತರ ಕೈ ಹಿಡಿಯುವ ಸಲುವಾಗಿ 57 ಕೆರೆಗಳಿಗೆ ತುಂಗಭದ್ರಾ ನದಿಯ ನೀರನ್ನು ತುಂಬಿಸಲು ಯೋಜನೆ ರೂಪಿಸಿದ್ದು, ಈಗಾಗಲೇ 660 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಿದೆ.

ಹರಿಹರ ತಾಲೂಕಿನ ದೀಟೂರು ಗ್ರಾಮದ ಬಳಿ ಹಾದು ಹೋಗಿರುವ ತುಂಗಭದ್ರಾ ನದಿ ಬಳಿ ಬೃಹತ್ ಆಕಾರದ ಜ್ಯಾಕ್ ವೆಲ್ ಮೂಲಕ ಜಗಳೂರಿನ 57 ಕೆರೆಗಳಿಗೆ ನೀರು ಪೂರೈಸಲು ಕಾಮಗಾರಿ ಆರಂಭಿಸಲಾಗಿದೆ. ಜಗಳೂರಿಗೆ ನೀರ‌ನ್ನು ಕೊಂಡೊಯ್ಯಲು ಈಗಾಗಲೇ 31 ಕಿ.ಮೀ ಉದ್ದದ ಪೈಪ್‌ಲೈನ್ ಕಾಮಗಾರಿ ಮುಗಿಯುವ ಹಂತ ತಲುಪಿದೆ.

ಇದೀಗ ಕೇವಲ 13 ಕಿ.ಮೀ ಪೈಪ್‌ಲೈನ್ ಕಾಮಗಾರಿ ಮಾತ್ರ ಬಾಕಿ ಇದೆ. ಬರದಿಂದ ಬೇಸತ್ತಿದ್ದ ಜಗಳೂರಿನ ರೈತರಿಗೆ ಈ ನೀರು ಉಪಯೋಗವಾಗಲ್ಲಿದ್ದು, ಸಾಕಷ್ಟು ಕೊಳವೆ ಬಾವಿಯ ಅಂತರ್ಜಲ ಅಭಿವೃದ್ಧಿ ಹೊಂದಲಿದೆ. ಪ್ರಥಮ ಹಂತವಾಗಿ ಜೂನ್-ಜುಲೈಗೆ 17 ಕೆರೆಗಳಿಗೆ ಹಾಗೂ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ 20 ಕೆರೆಗಳಿಗೆ, ನವೆಂಬರ್ ಹಾಗೂ ಡಿಸೆಂಬರ್​​ನಲ್ಲಿ 20 ಕೆರೆಗಳಿಗೆ ನೀರನ್ನು ತುಂಬಿಸುವ ಗುರಿ ಹೊಂದಲಾಗಿದೆ.

ಈಗಾಗಲೇ ಕಾಮಗಾರಿ ಆರಂಭವಾಗಿದ್ದರಿಂದ ಕಾಮಗಾರಿಗೆ 260 ಕೋಟಿ ರೂ. ವೆಚ್ಚವಾಗಿದೆ. 120 ಕೋಟಿ ಹಣ ಸರ್ಕಾರದಿಂದ ಬಿಡುಗಡೆಯಾಗಿದೆಯಂತೆ. ಇನ್ನು, ಈ 57 ಕೆರೆಗಳಿಗೆ ನೀರು ತುಂಬಿಸುವುದರಿಂದ ಜಗಳೂರಿನ ಜ‌ನರಿಗೆ ಕಾಡುತ್ತಿರುವ ಫ್ಲೋರೈಡ್ ಕಂಟಕ ಕೂಡ ದೂರ ಆಗಲಿದೆಯಂತೆ.

ರೈತರಿಗೆ ವರದಾನ :ಸದಾ ಬರದಿಂದ ಕಂಗ್ಗೆಟ್ಟಿದ್ದ ಜಗಳೂರಿನ ರೈತರಿಗೆ ತುಂಗಭದ್ರೆ ಕೈ ಹಿಡಿಯಲಿದ್ದಾಳೆ. ತುಂಗಾಭದ್ರಾ ನದಿಯಿಂದ 57 ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿಗಳಲ್ಲಿ ಜೀವಜಲ ನಳನಳಿಸಲಿದೆ.

ಇನ್ನು, ತೋಟಗಾರಿಕೆ ಬೆಳೆ ಸೊಪ್ಪು, ಹೂವು, ಬೆಳೆಯಲು ಈ ನೀರು ಉಪಯೋಗ ಆಗಲಿದೆ. ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಯವರ ಕನಸಾಗಿರುವ ಈ 57 ಕೆರೆಗಳ ತುಂಬಿಸುವ ಯೋಜನೆಯ ಕಾಮಗಾರಿ ಆರಂಭ ಆಗಿದ್ದು, ಈ ವರ್ಷಾಂತ್ಯದ ಡಿಸೆಂಬರ್ ತಿಂಗಳಿಗೆ ಕಾಮಗಾರಿ ಪೂರ್ಣಗೊಳ್ಳಲಿದೆ.

ABOUT THE AUTHOR

...view details