ಕರ್ನಾಟಕ

karnataka

ETV Bharat / state

ನಂಜನಗೂಡು ದೇವಾಲಯ ತೆರವು ಅಧಿಕಾರಿಗಳ ಆತುರದ ನಿರ್ಧಾರ : ಸಿಎಂ ಬೊಮ್ಮಾಯಿ

ದೇಗುಲಗಳ ತೆರವು ವಿಚಾರದಿಂದ ಜನರ ಮನಸ್ಸಿಗೆ ಘಾಸಿಯಾಗಿದೆ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೊಮ್ಮಾಯಿ
ಬೊಮ್ಮಾಯಿ

By

Published : Sep 19, 2021, 1:32 PM IST

Updated : Sep 19, 2021, 5:15 PM IST

ದಾವಣಗೆರೆ: ನಂಜನಗೂಡು ದೇವಾಲಯ ತೆರವು ಅಧಿಕಾರಿಗಳ ಆತುರದ ನಿರ್ಧಾರವಾಗಿದೆ. ಪರಿಣಾಮಗಳ ಬಗ್ಗೆ ಯೋಚಿಸದೆ ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನಗಳು ನಡೆದಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ.

‘ನಂಜನಗೂಡು ದೇಗುಲ ತೆರವಿನಿಂದ ಭಕ್ತರ ಮನಸ್ಸಿಗೆ ಘಾಸಿ’

ನಗರದಲ್ಲಿ ನಡೆಯುತ್ತಿರುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮಂದಿರದ ವಿಚಾರದಲ್ಲಿ ಹಲವಾರು ನಾಯಕರು ಸಂಘಟನೆ, ಕಾನೂನು ಪಂಡಿತರೊಡನೆ ಚರ್ಚೆ ಮಾಡಿದ್ದೇನೆ. ಕಾನೂನು ಮತ್ತು ಆಡಳಿತಾತ್ಮಕ ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳುತ್ತೇನೆ. ದೇಗುಲ ತೆರವುಗೊಳಿಸಿದ ವಿಚಾರದಲ್ಲಿ ಕೆಲ ಭಕ್ತರಿಗೆ ನೋವಾಗಿದ್ದು, ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲಾ ಸರಿದೂಗಿಸುತ್ತೇವೆ. ನಿಮ್ಮದೇ ಹಿತ ಚಿಂತನೆ ಬಯಸುವ ಸರ್ಕಾರವಿದೆ ಎಂದು ಸಿಎಂ ಬೊಮ್ಮಾಯಿ ಅಭಯ ನೀಡಿದ್ದಾರೆ.

ಸಿಎಂ ಬೊಮ್ಮಾಯಿ

ಕಾನೂನು ತೊಡಕಿನ ಮಧ್ಯೆಯೂ ಶಾಂತಿ‌ ಕದಡುವ ಕೆಲಸಕ್ಕೆ ಇತಿಶ್ರೀ ಹಾಡುವ ಕೆಲಸ ಮಾಡಿದ್ದೇನೆ. ಅಲ್ಲಿನ ಭಕ್ತರಿಗೆ ಘಾಸಿಯಾಗಿದ್ದು, ಅದನ್ನು ಸರಿದೂಗಿಸುವ ಕೆಲಸ ಮಾಡುತ್ತೇನೆ. ಪಕ್ಷದ ವರಿಷ್ಠರ ಮಾರ್ಗದರ್ಶನ ಪಡೆದು ಆ ಭಾಗದ ಜನರ ಭಾವನೆಗೆ ಸ್ಪಂದಿಸುವ ಕೆಲಸ ಆಗಲಿದೆ ಎಂದು ಸಿಎಂ ತಿಳಿಸಿದರು.

‘ಗಾಂಧೀಜಿ, ಕಾಂಗ್ರೆಸ್​ಅನ್ನು ವಿಸರ್ಜಿಸಬೇಕು ಎಂದಿದ್ದರು’

ಕಾಂಗ್ರೆಸ್​ಗೆ ಸ್ಪಷ್ಟ ಸಿದ್ಧಾಂತ, ವೈಚಾರಿಕತೆಯಿಲ್ಲ. ದೇಶದ ಬಗ್ಗೆ ಸರಿಯಾದ ನಿಲುವು ಹೊಂದಿಲ್ಲ. ಮಹಾತ್ಮಗಾಂಧಿ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕೆಂದಿದ್ದರು. ಮಹಾತ್ಮ ಗಾಂಧಿಯವರನ್ನಿಟ್ಟುಕೊಂಡು ಒಂದು ಗಾಂಧಿಯಿಂದ ಮತ್ತೊಂದು ಗಾಂಧಿಯನ್ನು ಹುಟ್ಟು ಹಾಕಿದರು. ಪ್ರಜಾಪ್ರಭತ್ವದ ಗಾಂಧಿಯೇ ಬೇರೆ, ಸರ್ವಾಧಿಕಾರಿ ಗಾಂಧಿಯೇ ಬೇರೆ. ದ್ವಂದ್ವದಲ್ಲಿ ದೇಶವಿಟ್ಟು, ಎಲ್ಲಾ ಸಮಸ್ಯೆಗಳ ಬಳುವಳಿಯನ್ನು ತಂದ ಪಕ್ಷ ಕಾಂಗ್ರೆಸ್ ಎಂದು ಸಿಎಂ ಬೊಮ್ಮಾಯಿ ಹರಿಹಾಯ್ದರು.

ಇದನ್ನೂ ಓದಿ: ದೇವಾಲಯಗಳ ಹೆಸರಿನಲ್ಲಿ ಕಾಂಗ್ರೆಸ್ ಮೊಸಳೆ‌ ಕಣ್ಣೀರು ಹಾಕುತ್ತಿದೆ: ಬಿ ವೈ ವಿಜಯೇಂದ್ರ

Last Updated : Sep 19, 2021, 5:15 PM IST

ABOUT THE AUTHOR

...view details