ಹರಿಹರ: ನಗರದ ಹೊರವಲಯದಲ್ಲಿರುವ ಶ್ರೀ ತರಳಬಾಳು ಜಗದ್ಗುರು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಪುಲ್ವಾಮಾ ದಾಳಿಯ ವೀರ ಸೈನಿಕರ ಸ್ಮರಣೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮ ನಡೆಸಲಾಯಿತು.
ಹರಿಹರದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋದರಿಗೆ ಗೌರವ ಸಲ್ಲಿಕೆ ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕ ಸುನಿಲ್ ಕುಮಾರ್ ಎಸ್.ಎನ್ ಮಾತನಾಡಿ, ತಾಯಿನಾಡಿನ ವಿಷಯದಲ್ಲಿ ಯಾವುದೇ ರೀತಿಯ ಹೋರಾಟಕ್ಕೆ ನಾವುಗಳು ಸದಾ ಸಿದ್ದರಾಗಿರಬೇಕು. ಅಷ್ಟೇ ಅಲ್ಲದೆ ಈ ದೇಶದ ನಿಜವಾದ ನಾಯಕರು ನಮ್ಮ ರೈತರು ಮತ್ತು ಸೈನಿಕರು. ಇವರ ಬಗ್ಗೆ ನಾವು ಹೆಮ್ಮೆ ಪಡುವಂಥವರಾಗಿರಬೇಕು ಎಂದರು.
ಮುಖ್ಯ ಶಿಕ್ಷಕರಾದ ರೇವಣಸಿದ್ದಪ್ಪ ಮಾತನಾಡಿ, ಪುಲ್ವಾಮಾ ದಾಳಿಯ ಪ್ರತ್ಯುತ್ತರವಾಗಿ ಬಾಲಾಕೋಟ್ ಪ್ರದೇಶದಲ್ಲಿ ಭಾರತದ ವಾಯುಪಡೆ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿದವು. ಬಾಲಾಕೋಟ್ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಿತು ಎಂದರು.
ಈ ವೇಳೆ ಮುಖ್ಯ ಶಿಕ್ಷಕಿ ವಿಜಯಾ ಪಿ, ಶಿಕ್ಷಕರಾದ ಶಿವಪ್ಪ, ಶಾಲೆಯ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಗೌರವ ಸಮರ್ಪಣೆ ಮಾಡಿದರು.