ದಾವಣಗೆರೆ: ಶೇ40ರಷ್ಟು ಕಮಿಷನ್ ಬಗ್ಗೆ ಲೋಕಾಯುಕ್ತದಲ್ಲಿ ತನಿಖೆಯಾಗಬೇಕು ಎಂದರೆ ತನಿಖೆಯಾಗಲಿ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಸ್ವಪಕ್ಷದ ಸಚಿವರ ವಿರುದ್ಧ ತನಿಖೆಯಾಗಲಿ ಎಂದು ಆಗ್ರಹಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ಸರ್ಕಾರಿ ಬಸ್ ನಿಲ್ದಾಣ ಉದ್ಘಾಟನೆ ನಂತರ ಶೇ 40ರಷ್ಟು ಕಮಿಷನ್ ತನಿಖೆ ನಡೆಸುವಂತೆ ಸಿದ್ದರಾಮಯ್ಯ ಒತ್ತಾಯ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಚಸ್ಮಾವನ್ನು ಒರೆಸಿಕೊಂಡು ಸರಿಯಾಗಿ ನೋಡಲಿ, ಯಾರನ್ನು ಪಕ್ಕದಲ್ಲಿ ಇಟ್ಟುಕೊಂಡು ಪೇ ಸಿಎಂ ಎಂದು ಹೋರಾಟ ಮಾಡ್ತಾ ಇದಾರೆ ನೋಡಿಕೊಳ್ಳಲಿ. ಅವರ ಪಕ್ಷದ ಡಿಕೆಶಿ ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬೇಲ್ ಮೇಲೆ ಇರುವ ವ್ಯಕ್ತಿ, ರಾಹುಲ್ ಗಾಂಧಿ ಕೂಡ ಬೇಲ್ ಮೇಲೆ ಇರುವವರು ಎಂದು ಡಿಕೆಶಿ ಹಾಗೂ ರಾಹುಲ್ ಗಾಂಧಿಗೆ ಟಕ್ಕರ್ ನೀಡಿದರು.
ಅವರನ್ನು ಪಕ್ಕದಲ್ಲಿ ಇಟ್ಟುಕೊಂಡು ಪೇ ಸಿಎಂ ಅಭಿಮಾನ ಮಾಡ್ತಾ ಇದಾರೆ. ಅವರಂತೆ ನಾನು ಕರುಣಾಕರ್ ರೆಡ್ಡಿ, ಬೊಮ್ಮಾಯಿ ಅವರು ಜೈಲ್ ಗೆ ಹೋಗಿ ಬಂದಿಲ್ಲ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರವಾಗದೇ ಪಾರದರ್ಶನಕವಾಗಿ ಕೆಲಸ ಮಾಡುತ್ತಿದ್ದೇವೆ. ಲೋಕಾಯುಕ್ತದಲ್ಲಿ ತನಿಖೆಯಾಗಬೇಕು ಎಂದರೆ ತನಿಖೆಯಾಗಲಿ ಎಂದರು.