ಕರ್ನಾಟಕ

karnataka

ETV Bharat / state

ಕೋಪ ನೆತ್ತಿಗೇರಿ ಬೈಕ್ ಸವಾರನನ್ನ ಥಳಿಸಿದ ಪೊಲೀಸ್ ಪೇದೆ...! - ದಾವಣಗೆರೆಯಲ್ಲಿ ಪೊಲೀಸರಿಂದ ಬೈಕ್​ ಸವಾರನಿಗೆ ಥಳಿತ ಸುದ್ದಿ

ಟ್ರಾಫಿಕ್ ಪೊಲೀಸರು ಹಾಗೂ ಬೈಕ್ ಸವಾರರ ನಡುವೆ ಮಾತಿನ ಚಕಮಕಿ ನಡೆದು ಬೈಕ್​ ಸವಾರನಿಗೆ ಪೊಲೀಸರು ಥಳಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

police
ಬೈಕ್ ಸವಾರನನ್ನ ಥಳಿಸಿದ ಪೊಲೀಸ್

By

Published : Dec 6, 2019, 3:18 PM IST

ದಾವಣಗೆರೆ:ಟ್ರಾಫಿಕ್ ಪೊಲೀಸರು ಹಾಗೂ ಬೈಕ್ ಸವಾರರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಬೈಕ್ ಸವಾರನಿಗೆ ಥಳಿಸಿದ ಘಟನೆ ನಗರದ ವಿದ್ಯಾನಗರದ ಬಿಐಟಿ ರಸ್ತೆಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಿಐಟಿ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಬೈಕ್ ಸವಾರನನ್ನು ತಡೆದರು. ದಾಖಲಾತಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಸರಿಯಾದ ಮಾಹಿತಿ ನೀಡಲಿಲ್ಲ. ಈ ವೇಳೆ ಪೊಲೀಸರನ್ನು ಅವಾಚ್ಯ ಶಬ್ಧಗಳಿಂದ ಬೈಕ್ ಸವಾರ ನಿಂದಿಸಿದ್ದಾನೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಪೊಲೀಸ್ ಪೇದೆ ಬೈಕ್ ಸವಾರನ ಮೇಲೆ‌ ಹಲ್ಲೆ ನಡೆಸಿದ್ದು, ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್​​​ನಲ್ಲಿ ಚಿತ್ರೀಕರಿಸಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗುತ್ತಿದೆ.

ಬೈಕ್ ಸವಾರನನ್ನ ಥಳಿಸಿದ ಪೊಲೀಸ್

ಬೈಕ್ ಸವಾರನಿಗೆ ಕಾಲಿನಿಂದ ಒದ್ದು ಟ್ರಾಫಿಕ್ ಪೊಲೀಸ್ ಹಲ್ಲೆ ನಡೆಸುತ್ತಿದ್ದ ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ.

For All Latest Updates

TAGGED:

ABOUT THE AUTHOR

...view details