ಸೊಂಪಾಗಿ ಬೆಳೆದಿದ್ದ ಟೊಮ್ಯಾಟೊ ಬೆಳೆಗೆ 'ಕ್ರಿಮಿನಾಶಕ' ಸಿಂಪಡಿಸಿ ಕೈ ಸುಟ್ಟುಕೊಂಡ ರೈತರು! - congress kisssan unit president v shivaganaga
ಕೊಡಗನೂರು ಗ್ರಾಮದ ಶಿವಮೂರ್ತಿ ಹಾಗೂ ಮಂಜುನಾಥ್ ಎಂಬ ರೈತರು ಸೇರಿದಂತೆ ಹಲವರು ಟೊಮ್ಯಾಟೊ ಬೆಳೆ ಬೆಳೆದಿದ್ದರು. ಫಸಲು ಕೂಡ ಚೆನ್ನಾಗಿ ಬಂದಿತ್ತು. ಇನ್ನೂ ಹೆಚ್ಚಿನ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರು ಖಾಸಗಿ ಕಂಪನಿಯ ವ್ಯಕ್ತಿಯೊಬ್ಬರ ಸಲಹೆಯಂತೆ ಕ್ರಿಮಿನಾಶಕ ಔಷಧಿಯನ್ನು ಸಿಂಪಡಿಸಿದ್ದು, ಉತ್ತಮ ಇಳುವರಿಯನ್ನು ಕಳೆದುಕೊಂಡಿದ್ದಾರೆ.
ಟೊಮೇಟೊ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಿ ಕೈ ಸುಟ್ಟುಕೊಂಡ ರೈತರು
ದಾವಣಗೆರೆ:ಉತ್ತಮ ಟೊಮ್ಯಾಟೊ ಇಳುವರಿಯ ನಡುವೆ ಇನ್ನೂ ಹೆಚ್ಚಾಗಿ ಬೆಳೆ ಬರಲಿ ಎಂಬ ಆಸೆಯಿಂದ ಕ್ರಿಮಿನಾಶಕ ಔಷಧಿ ಸಿಂಪಡಣೆ ಮಾಡಿದ್ದ ರೈತರು ಈಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕ್ರಿಮಿನಾಶಕ ಸಿಂಪಡಣೆ ಮಾಡಿದ ಮೇಲೆ ಗಿಡಗಳೆಲ್ಲಾ ಸುಟ್ಟು ಹೋಗಿ ಬೆಳೆ ನಾಶವಾಗಿದೆ ಎಂದು ಬೆಳೆಗಾರರು ಆರೋಪಿಸಿದ್ದಾರೆ.