ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಅಗ್ನಿ ಅವಘಡ: 3 ಅಂಗಡಿಗಳು ಸಂಪೂರ್ಣ ಭಸ್ಮ! - Fire accident in Davanagere

ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಗುಜರಿ ಅಂಗಡಿ ಸೇರಿದಂತೆ ಮೂರು ಅಂಗಡಿಗಳು ಸಂಪೂರ್ಣ ಭಸ್ಮವಾಗಿವೆ.

Fire accident in Davanagere
ದಾವಣಗೆರೆಯಲ್ಲಿ ಅಗ್ನಿ ಅವಘಡ: 3 ಅಂಗಡಿಗಳು ಸಂಪೂರ್ಣ ಭಸ್ಮ

By

Published : Feb 12, 2022, 9:52 AM IST

ದಾವಣಗೆರೆ:ಜಿಲ್ಲೆಯ ಜಗಳೂರು ಪಟ್ಟಣದ ಕೆರೆ ಪಕ್ಕದಲ್ಲಿರುವ ಅಂಗಡಿಗಳಲ್ಲಿ ಕಳೆದ ತಡರಾತ್ರಿ (ಶುಕ್ರವಾರ) ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಗುಜರಿ ಅಂಗಡಿ ಸೇರಿದಂತೆ ಮೂರು ಅಂಗಡಿಗಳು ಸಂಪೂರ್ಣ ಭಸ್ಮವಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಗುಜರಿ ವಸ್ತುಗಳು ಸುಟ್ಟು ಕರಕಲಾಗಿವೆ.

ದಾವಣಗೆರೆಯಲ್ಲಿ ಅಗ್ನಿ ಅವಘಡ: 3 ಅಂಗಡಿಗಳು ಸಂಪೂರ್ಣ ಭಸ್ಮ

ಅಗ್ನಿ ಅವಘಡದಿಂದ 15 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೇ ಗುಜರಿ ಅಂಗಡಿಗಳ ಬಳಿ ನಿಲ್ಲಿಸಿದ್ದ ಕಾರು ಕೂಡ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ‌ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಗಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದ್ದು,‌ ಕಿಡಿಗೇಡು ಬೆಂಕಿ ಇಟ್ಟಿದ್ದಾರೆ ಎಂದು ಅಂಗಡಿ ಮಾಲೀಕರು ಆರೋಪ ಮಾಡಿದ್ದಾರೆ. ಜಗಳೂರು ಠಾಣೆಯ ಪೋಲಿಸರು ಘಟನಾ ಸ್ಥಳಕ್ಕೆ‌ ಭೇಟಿ ನೀಡಿ‌ ಪರಿಶೀಲನೆ‌ ನಡೆಸಿದ್ದಾರೆ.

ಇದನ್ನೂ ಓದಿ:ಖೋಟಾ ನೋಟ ಜಾಲದ ಶಂಕೆ: 40 ಲಕ್ಷಕ್ಕೆ ಒಂದು ಕೋಟಿ ಆಫರ್​.. ವಂಚನೆ

ABOUT THE AUTHOR

...view details