ಕರ್ನಾಟಕ

karnataka

ETV Bharat / state

ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು ಪ್ರಕರಣ: ಪಿಎಸ್ಐ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಅಮಾನತು - ದಾವಣಗೆರೆ ಅಪ್ಡೇಟ್‌

ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ವ್ಯಕ್ತಿ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.

Three police  arrested along with PSI
ಪಿಎಸ್ಐ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಬಂಧನ

By

Published : Oct 7, 2020, 10:24 AM IST

Updated : Oct 7, 2020, 12:37 PM IST

ದಾವಣಗೆರೆ: ಪೊಲೀಸರ ವಶದಲ್ಲಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಕೊಂಡ ಪಿಎಸ್ಐ ಸೇರಿದಂತೆ ಮೂವರನ್ನು ಅಮಾನತುಗೊಳಿಸಿ ಎಸ್ಪಿ ಹನುಮಂತರಾಯ ಆದೇಶಿಸಿದ್ದಾರೆ.

ಪಿಎಸ್ಐ ಪ್ರಕಾಶ್, ಹೆಡ್ ಕಾನ್ಸ್​​ಟೇಬಲ್ ನಾಗರಾಜ್ ಹಾಗೂ ಪೊಲೀಸ್ ಕಾನ್ಸ್​ಟೇಬಲ್​​ ಶೇರ್ ಅಲಿ ಸಸ್ಪೆಂಡ್ ಆದ ಪೊಲೀಸ್ ಸಿಬ್ಬಂದಿ. ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ವ್ಯಕ್ತಿ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.

ಪಿಎಸ್ಐ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಬಂಧನ

ಕೌಟುಂಬಿಕ‌ ಕಲಹದ ಕಾರಣದಿಂದ ಪತ್ನಿಯು ದೂರು ನೀಡಿದ್ದರಿಂದ ಮಾಯಕೊಂಡ ಸಮೀಪದ ವಿಟ್ಟಲಾಪುರ ಗ್ರಾಮದ ನಿವಾಸಿ ಮರಳಸಿದ್ಧಪ್ಪ ಎಂಬಾತನನ್ನು ವಿಚಾರಣೆಗೆ ಪೊಲೀಸರು ಕರೆತಂದಿದ್ದರು. ಮರಳಸಿದ್ಧಪ್ಪ ಮೃತದೇಹ ಠಾಣೆ ಬಳಿಯ ರೈಲ್ವೆ ನಿಲ್ದಾಣದ ಸಮೀಪ ಪತ್ತೆಯಾಗಿತ್ತು.‌ ಮೃತನ ಕುಟುಂಬಸ್ಥರು ಹಾಗೂ ಸಂಬಂಧಿಕರು ಪೊಲೀಸರು ಹಲ್ಲೆ ನಡೆಸಿದ ಪರಿಣಾಮ ಮರಳಸಿದ್ಧಪ್ಪ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ‌ ನಡೆಸಿದ್ದರು.‌ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

ಪೂರ್ವವಲಯ ಐಜಿಪಿ ಎಸ್.‌ರವಿ, ಎಸ್ಪಿ ಹನುಮಂತರಾಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೇಲ್ನೋಟಕ್ಕೆ ಪೊಲೀಸರು ತಪ್ಪು ಎಸಗಿದ್ದು ಕಂಡು ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಯುವತಿ ಜೊತೆ ಓಡಿ ಹೋಗಿ ಮರಳಸಿದ್ದಪ್ಪ ಎರಡನೇ ಮದುವೆಯಾಗಿದ್ದನಂತೆ. ಈತನನ್ನು ಹುಡುಕಿಕೊಂಡುವಂತೆ ಆತನ‌ ಮೊದಲ ಪತ್ನಿ ಅಕ್ಟೋಬರ್ 3ರಂದು ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Last Updated : Oct 7, 2020, 12:37 PM IST

ABOUT THE AUTHOR

...view details