ದಾವಣಗೆರೆ:ಜಗಳೂರು ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಮೂವರು ಸಾವನಪ್ಪಿದ್ದು, ಓರ್ವ ಗಾಯಗೊಂಡಿದ್ದಾನೆ. ಜಗಳೂರು ಹೊರವಲಯದ ಕೊಟ್ಟೂರು ರಸ್ತೆಯಲ್ಲಿ ಸಂಭವಿಸಿದ ಬೈಕ್ಗಳ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸಾವನಪ್ಪಿ ಓರ್ವ ಗಾಯಗೊಂಡಿದ್ದಾನೆ.
ಜಗಳೂರು: ಎರಡು ಪ್ರತ್ಯೇಕ ಬೈಕ್ ಅಪಘಾತದಲ್ಲಿ ಮೂವರು ಸಾವು - confrontation between the bike
ಮಲೆಮಾಚಿಕೆರೆ ಗ್ರಾಮದ ಅರಣ್ಯ ಇಲಾಖೆಯ ದಿನಗೂಲಿ ನೌಕರ ಕರಿಬಸವ ಹಾಗೂ ಕ್ಯಾಸೇನಹಳ್ಳಿ ಗ್ರಾಮದ ಹನುಮಂತಪ್ಪ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮನ್ಸೂರ್ ಎಂಬಾತ ಸಾವನಪ್ಪಿದ್ದಾನೆ.
![ಜಗಳೂರು: ಎರಡು ಪ್ರತ್ಯೇಕ ಬೈಕ್ ಅಪಘಾತದಲ್ಲಿ ಮೂವರು ಸಾವು Three killed in two bike accidents in Jagaloor](https://etvbharatimages.akamaized.net/etvbharat/prod-images/768-512-8306371-thumbnail-3x2-dvg.jpg)
ಜಗಳೂರು: ಎರಡು ಪ್ರತ್ಯೇಕ ಬೈಕ್ ಅಪಘಾತದಲ್ಲಿ ಮೂವರು ಸಾವು
ಮಲೆಮಾಚಿಕೆರೆ ಗ್ರಾಮದ ಅರಣ್ಯ ಇಲಾಖೆಯ ದಿನಗೂಲಿ ನೌಕರ ಕರಿಬಸವ ಹಾಗೂ ಕ್ಯಾಸೇನಹಳ್ಳಿ ಗ್ರಾಮದ ಹನುಮಂತಪ್ಪ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಕ್ಕಮ್ಮನಹಟ್ಟಿ ತಿರುವು ಸಮೀಪ ಈ ಅಪಘಾತ ಸಂಭವಿಸಿದ್ದು, ಬೈಕ್ಗಳು ಸಂಪೂರ್ಣ ನುಜ್ಜುಗುಜ್ಕಾಗಿವೆ.
ಇನ್ನೂ ಜಗಳೂರಿನ ಗೌರಿಪುರ ಕ್ರಾಸ್ ಬಳಿ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಮನ್ಸೂರ್ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಈತ ಗ್ರಾಮೀಣ ಸ್ವಸಹಾಯ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.