ಕರ್ನಾಟಕ

karnataka

ETV Bharat / state

ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರ ದಾರುಣ ಸಾವು - ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣ

ಪೈಯಾನ್(08), ಅಫ್ಪಾನ್ (10), ಆಷೀಕ್ (08) ಸಾವನ್ನಪ್ಪಿದ ‌ಮಕ್ಕಳು.ಶನಿವಾರ ಮಧ್ಯಾಹ್ನ ಮನೆಯಿಂದ‌ ಹೊರಗೆ ಆಟವಾಡಲು ಹೋಗಿದ್ದ ಮೂವರು ಬಾಲಕರು ಸಂಜೆಯಾದರು ಮನೆಗೆ ಬಾರದ ಹಿನ್ನಲೆಯಲ್ಲಿ ಪೋಷಕರು ಹುಡುಕಾಡಿದಾಗ ಈ ವಿಚಾರ ತಿಳಿದುಬಂದಿದೆ.

Three boys drown in lake at Davangere
ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರ ದಾರುಣ ಸಾವು

By

Published : Nov 14, 2021, 2:04 AM IST

ದಾವಣಗೆರೆ: ಕೆರೆತಲ್ಲಿ ಈಜಾಡಲು ಹೋಗಿ ಮೂರು ಜನ ಬಾಲಕರು ಸಾವನಪ್ಪಿರುವ ಘಟನೆ ದಾವಣಗೆರೆ(Davangere) ಜಿಲ್ಲೆಯ ಜಗಳೂರು ಪಟ್ಟಣದ ದೊಡ್ಡಕೆರೆಯಲ್ಲಿ ನಡೆದಿದೆ.

ಪೈಯಾನ್(08), ಅಫ್ಪಾನ್ (10), ಆಷೀಕ್ (08) ಸಾವನ್ನಪ್ಪಿದ ‌ಮಕ್ಕಳು.ಶನಿವಾರ ಮಧ್ಯಾಹ್ನ ಮನೆಯಿಂದ‌ ಹೊರಗೆ ಆಟವಾಡಲು ಹೋಗಿದ್ದ ಮೂವರು ಬಾಲಕರು ಸಂಜೆಯಾದರು ಮನೆಗೆ ಬಾರದ ಹಿನ್ನಲೆಯಲ್ಲಿ ಪೋಷಕರು ಹುಡುಕಾಡಿದಾಗ ಈ ವಿಚಾರ ತಿಳಿದುಬಂದಿದೆ.

ಕೆರೆಯ ದಡದ ಮೇಲೆ ಬಟ್ಟೆಗಳು ಕಂಡ ಬೆನ್ನಲ್ಲೆ ಪೊಲೀಸರಿಗೆ ಪೋಷಕರು ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಕೆರೆಯಲ್ಲಿ‌ ಮುಳುಗಿದ್ದ ಮಕ್ಕಳ‌ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ.

ಬಾಳಿ ಬದುಕಬೇಕಾಗಿದ್ದ ಮೂರು ಬಾಲಕರ ಮೃತದೇಹಗಳನ್ನು ನೋಡಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇದರ ಸಂಬಂಧ ಜಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ:ವಿಶೇಷಚೇತನ ಬಾಲಕಿ ಮೇಲೆ ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ!

ABOUT THE AUTHOR

...view details