ಕರ್ನಾಟಕ

karnataka

ETV Bharat / state

ಬಿಜೆಪಿಗೆ ವಲಸೆ ಹೋದ ಶಾಸಕರು ಕಾಂಗ್ರೆಸ್​​​​ಗೆ ಬಂದೇ ಬರ್ತಾರೆ : ಸತೀಶ್ ಜಾರಕಿಹೊಳಿ

ಬಿಜೆಪಿಗೆ ವಲಸೆ ಹೋದ ಶಾಸಕರು ಕಾಂಗ್ರೆಸ್​​​ಗೆ ಬಂದೇ ಬರುತ್ತಾರೆ. ಈಗಾಗಲೇ ಪಕ್ಷದ ಅಧ್ಯಕ್ಷರು ಸೇರಿದಂತೆ ಸಿಎಲ್​​​ಪಿ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ..

Those who have gone to BJP will come to Congress : Satish jarkiholi
ಬಿಜೆಪಿಗೆ ಹೋದವರು ಕಾಂಗ್ರೆಸ್​​ಗೆ ಬರುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ

By

Published : Feb 13, 2022, 5:06 PM IST

ದಾವಣಗೆರೆ :ಬಿಜೆಪಿಗೆ ವಲಸೆ ಹೋದ ಶಾಸಕರು ಕಾಂಗ್ರೆಸ್​​​ಗೆ ಬಂದೇ ಬರುತ್ತಾರೆ. ಈಗಾಗಲೇ ಪಕ್ಷದ ಅಧ್ಯಕ್ಷರು ಸೇರಿದಂತೆ ಸಿಎಲ್​​​ಪಿ ನಾಯಕರನ್ನ ಭೇಟಿಯಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದರು.‌

ಬಿಜೆಪಿಗೆ ಹೋದವರು ಕಾಂಗ್ರೆಸ್​​ಗೆ ಬರುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ..

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಒಂದು ಹಂತದ ಮಾತುಕತೆ ನಡೆದಿದೆ. ಪಕ್ಷ ಬಿಟ್ಟು ಹೋದವರು ಚುನಾವಣೆ ಹತ್ತಿರ ಫೆಬ್ರವರಿ ತಿಂಗಳಲ್ಲಿ ಬರಲಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ ಇದೆಲ್ಲ ಸಹಜ. ಅಲ್ಲಿದ್ದೋರು ಇಲ್ಲಿ ಇರುತ್ತಾರೆ. ಇಲ್ಲಿ ಇದ್ದೋರು ಅಲ್ಲಿ ಇರುತ್ತಾರೆ ಎಂದರು.

ಸಿದ್ದರಾಮಯ್ಯನವರು ಪಕ್ಷದಲ್ಲಿ ಅಶಕ್ತರಾಗಿದ್ದಾರೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ಯಾವಾಗಲೂ ಟಾಪ್ ಅಲ್ಲೆ ಇರುತ್ತಾರೆ. ರಾಜ್ಯದಲ್ಲಿ ಅವರದ್ದೇ ಆದ ಬೆಂಬಲಿಗರ ಪಡೆಯಿದೆ. ಅವರಿಗೆ ರಾಜ್ಯದಲ್ಲಿ ಮಾಸ್ ಅಟ್ಯ್ರಾಕ್ಷನ್ ಇದೆ. ಅವರು ಯಾವಾಗಲೂ ನಂಬರ್ ಒನ್ ಆಗಿಯೇ ಇರ್ತಾರೆ ಎಂದರು.

ಇನ್ನು ಸಿಎಂ ಇಬ್ರಾಹಿಂರೊಂದಿಗೆ ವರಿಷ್ಠರು ಮಾತುಕತೆ ನಡೆಸುತ್ತಿದ್ದಾರೆ. ಅವರು ನಮ್ಮ ಜೊತೆಯೇ ಇರ್ತಾರೆ ಎಂಬ ವಿಶ್ವಾಸಯಿದೆ. ಸಿದ್ದರಾಮಯ್ಯನವರೆ ಮಾತನಾಡುತ್ತಾ ಇದ್ದಾರೆ ಎಂದರು.

ಹಿಜಾಬ್-ಕೇಸರಿ ಶಾಲು ಗಲಾಟೆ ವಿಚಾರ ಉಡುಪಿಯಿಂದ ಆರಂಭ ಆಗಿದ್ದು, ಅದನ್ನು ಮಾಡಿದವರು ಕೆಲವೇ ಕೆಲವು ಸಂಘಟನೆಯವರು, ಅದು ಬೇಗ ಮುಗಿಯಲಿ ಅನ್ನೋದು ನಮ್ಮ ಆಸೆ, ನಮ್ಮ ದೇಶ, ಸಮಾಜದ ಪ್ರಾಮುಖ್ಯತೆ ದೇಶ. ಹಿಜಾಬ್-ಕೇಸರಿ ವಿಚಾರವಾಗಿ ಸರ್ಕಾರ,ನ್ಯಾಯಾಲಯ ಒಂದು ತೀರ್ಮಾನಕ್ಕೆ ಬರಬೇಕು. ಎರಡು ಕಡೆ ಸರಿಯಾದ ನ್ಯಾಯ ಸಿಗುವಂತೆ ಆಗಬೇಕು ಎಂದರು.

ಇದನ್ನೂ ಓದಿ: ಯಾವ್ನೋ ಈಶ್ವರಪ್ಪ ಅಂತೆ, ಅವನೊಬ್ಬ ತಲೆಕೆಟ್ಟ ಈಶ್ವರಪ್ಪ.. ಏಕವಚನದಲ್ಲೇ ಡಿಕೆಶಿ ವಾಗ್ದಾಳಿ

ABOUT THE AUTHOR

...view details