ಕರ್ನಾಟಕ

karnataka

ETV Bharat / state

ಬಸ್​​ನ ಬಾಗಿಲು ಬೈಕ್​​ಗೆ ತಾಗಿ ಕೆಳಗೆ ಬಿದ್ದ ಮಹಿಳೆ ಸ್ಥಳದಲ್ಲೇ ಸಾವು - undefined

ಚಲಿಸುತ್ತಿದ್ದ ಬಸ್​ನ ಬಾಗಿಲು ಬೈಕ್​​ಗೆ ತಾಗಿ, ಬೈಕ್​ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಬೈಕ್​​​ನಲ್ಲಿದ್ದ ಮಹಿಳೆ ಸಾವು

By

Published : Mar 24, 2019, 5:36 PM IST

ದಾವಣಗೆರೆ: ಚಲಿಸುತ್ತಿರುವ ಬಸ್​​ನ ಬಾಗಿಲು ತಾಗಿ ಬೈಕ್​​​ನಲ್ಲಿದ್ದ ಮಹಿಳೆ ಕೆಳಗೆ ಬಿದ್ದು, ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ಡಿಸಿಎಂ ಬಳಿಯ ರೈಲ್ವೆ ಸೇತುವೆ ಸಮೀಪ ಘಟನೆ ನಡೆದಿದೆ.

ನಾಗರತ್ನಾ (48) ಸಾವನ್ನಪ್ಪಿದ ಮಹಿಳೆ ಎಂದು ಗುರುತಿಸಲಾಗಿದೆ. ದಾವಣಗೆರೆ ತಾಲೂಕಿನ ಹಿರೇಮರಡಿ ಗ್ರಾಮ ನಿವಾಸಿ ನಾಗರತ್ನ ಎಂದು ಹೇಳಲಾಗಿದ್ದು, ಮಗಳ ಮದುವೆಗೆ ದಿನಾಂಕ ನಿಗದಿಗೆ ಪುರೋಹಿತರ ಬಳಿ ಪತಿಯೊಂದಿಗೆ ನಾಗರತ್ನ ಬಂದಿದ್ದರು.

ಬೈಕ್​​​ನಲ್ಲಿದ್ದ ಮಹಿಳೆ ಸಾವು

ವಾಪಸ್ ಊರಿಗೆ ತೆರಳುತ್ತಿದ್ದಾಗ, ಈ ವೇಳೆ ದಾವಣಗೆರೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಸಾರಿಗೆ ಇಲಾಖೆ ಬಸ್​​ನ ಬಾಗಿಲು ಬೈಕ್​​ಗೆ ತಾಗಿದೆ. ಪರಿಣಾಮ ಮಹಿಳೆ ಕೆಳಗೆ ಬಿದ್ದಿದ್ದು, ಬಸ್​​​ನ ಹಿಂದಿನ ಚಕ್ರ ತಲೆ ಮೇಲೆ ಹರಿದಿದೆ ಎಂದು ಹೇಳಲಾಗ್ತಿದೆ.

ಇನ್ನೂ ಪತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರ್​​ಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details