ದಾವಣಗೆರೆ:ರಾಜ್ಯದಲ್ಲಿ ಈಗಾಗಲೇ ಗ್ರಾಮ ಪಂಚಾಯತ್ ಚುನಾವಣೆ ಕಾವು ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲೂ ಕೂಡ ಮೊದಲ ಹಂತದಲ್ಲಿ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಆದ್ರೆ ಇಲ್ಲೊಂದು ಗ್ರಾಮ ಪಂಚಾಯತ್ನಲ್ಲಿ ಮತದಾರರ ಪಟ್ಟಿ ಅದಲು-ಬದಲಾಗಿರುವುದು ಮತದಾರರು ಹಾಗೂ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ದಾವಣಗೆರೆ ಸೇರಿದಂತೆ ಹೊನ್ನಾಳಿ, ಜಗಳೂರು ತಾಲೂಕುಗಳಲ್ಲಿ ಮೊದಲ ಹಂತದಲ್ಲಿ ಈಗಾಗಲೇ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ. ದಾವಣಗೆರೆ ತಾಲೂಕಿನ ಶಿರಮಗೊಂಡನ ಹಳ್ಳಿಯಲ್ಲಿ ಮತದಾರರ ಪಟ್ಟಿ ಅದಲು-ಬದಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೂರ್ನಾಲ್ಕು ವಾರ್ಡ್ಗಳು ಇದ್ದು, ಕಳೆದ ಗ್ರಾ.ಪಂ ಚುನಾವಣೆಯಲ್ಲಿ ಒಂದನೇ ವಾರ್ಡ್ನ ಮತದಾರರ ಹೆಸರು ಹಾಗೂ ಅಭ್ಯರ್ಥಿ ಮತದಾರರ ಹೆಸರುಗಳು ಒಂದನೇ ವಾರ್ಡ್ನಲ್ಲೇ ಇದ್ದವು. ಆದ್ದರಿಂದ ಅವರೆಲ್ಲಾ ಒಂದನೇ ವಾರ್ಡ್ನಲ್ಲೇ ಮತದಾನ ಮಾಡಿದ್ದರು. ಈ ಬಾರಿ ಸುಮಾರು 150 ಕ್ಕೂ ಹೆಚ್ಚು ಜನ ಮತದಾರರ ಮತದಾನದ ಪಟ್ಟಿ ಅದಲು-ಬದಲು ಆಗಿದ್ದು, ಒಂದನೇ ವಾರ್ಡ್ನಿಂದ ಎರಡನೇ ವಾರ್ಡ್ಗೆ ಬಂದು ಮತದಾನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದಡೆ. ಮತದಾನ ಮಾಡಲು ಮೂರ್ನಾಲ್ಕು ಕಿ.ಮೀ ಕ್ರಮಿಸಿ ಮತದಾನ ಮಾಡಬೇಕಾಗಿದೆ. ಇದರಿಂದ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮತದಾರರ ಪಟ್ಟಿ ಸರಿಪಡಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ರವಾನಿಸಿದ್ದಾರೆ.