ಕರ್ನಾಟಕ

karnataka

ETV Bharat / state

ಜೀವದ ಹಂಗು ತೊರೆದು ಹಳ್ಳದಲ್ಲಿ ಕೊಚ್ಚಿ ಹೋಗ್ತಿದ್ದವರನ್ನು ರಕ್ಷಿಸಿದ ಗ್ರಾಮಸ್ಥರು-ವಿಡಿಯೋ - arasapura flood news

ಅನಿರೀಕ್ಷಿತವಾಗಿ ಹಳ್ಳಕ್ಕೆ ಬಂದ ಪ್ರವಾಹದಿಂದ ಹಳ್ಳದಲ್ಲಿ‌ ಕೊಚ್ಚಿ ಹೋಗುತ್ತಿದ್ದ ಹಳ್ಳಿಗಳಿಗೆ ತಂಪುಪಾನೀಯಗಳನ್ನು ಪೂರೈಕೆ ಮಾಡುತ್ತಿದ್ದ ಇಬ್ಬರು ಪ್ರವಾಹದಲ್ಲಿ ಸಿಲುಕಿದ್ದವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ರಕ್ಷಣೆ ಮಾಡಿದ ಗ್ರಾಮಸ್ಥರು.

By

Published : Oct 23, 2019, 2:50 PM IST

ದಾವಣಗೆರೆ: ಭಾರಿ ಮಳೆಯಿಂದ ಅನಿರೀಕ್ಷಿತವಾಗಿ ಹಳ್ಳದಲ್ಲಿ ಸೃಷ್ಟಿಯಾದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ಗ್ರಾಮಸ್ಥರೇ ರಕ್ಷಿಸುವ ಮೂಲಕ ಸಾಹಸ ಮೆರೆದಿದ್ದಾರೆ.

ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ರಕ್ಷಣೆ ಮಾಡಿದ ಗ್ರಾಮಸ್ಥರು

ದಾವಣಗೆರೆ ತಾಲೂಕಿನ ಅರಸಾಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಅರಸಾಪುರ ಹಾಗೂ ಅವರಗೊಳ್ಳ ಗ್ರಾಮದ ನಡುವಿನ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳಿಗಳಿಗೆ ತಂಪು ಪಾನೀಯಗಳನ್ನು ಪೂರೈಸುತ್ತಿದ್ದ ವಾಹನ ಹಳ್ಳದಲ್ಲಿ ಸಿಲುಕಿಕಿಕೊಂಡು ವ್ಯಕ್ತಿಗಳಿಬ್ಬರು ಸಂಕಷ್ಟಪಡುತ್ತಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಹಗ್ಗ ಹಾಗೂ ಟ್ರ್ಯಾಕ್ಟರ್ ತಂದು ಅವರನ್ನು ರಕ್ಷಣೆ ಮಾಡಿದ್ದಾರೆ. ಹಳ್ಳದಲ್ಲಿ ಸಿಲುಕಿದ್ದ ವಾಹನ ಜಖಂ ಆಗಿದೆ ಎಂದು ತಿಳಿದುಬಂದಿದೆ.

ABOUT THE AUTHOR

...view details