ದಾವಣಗೆರೆ: ಕುಂಬಳಕಾಯಿ ಕೂಡ ಶ್ರೀರಾಮುಲು ಅವರ ಕೈಯಲ್ಲಿದೆ. ಕುಡುಗೋಲು ಸಹ ಅವರ ಬಳಿ ಇದೆ ಎಂದು ಮೀಸಲಾತಿ ವಿಚಾರವಾಗಿ ಸಚಿವ ಶ್ರೀರಾಮುಲುಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದರು.
ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಅವರು ಪಕ್ಷ ಹಾಗೂ ಸಿಎಂ ಮೇಲೆ ಒತ್ತಡ ಹಾಕಲಿ. ಸಿಎಂ ಮನವೊಲಿಸಿ ಮೀಸಲಾತಿ ಹೆಚ್ಚಿಸಲಿ. ನಾವು ಸಚಿವ ಶ್ರೀರಾಮುಲುಗೆ ಸಾಥ್ ಕೊಡುತ್ತೇವೆ. ಮೀಸಲಾತಿ ಹೆಚ್ಚಳ ಸಮಾಜಕ್ಕೆ ಸಿಗಬೇಕಾದ ಆಸ್ತಿಯಾಗಿದೆ. ಇಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಮಾತಿಲ್ಲ. ಕಳೆದ ಬಾರಿ ನಮಗೆ ಮೀಸಲಾತಿ ಹೆಚ್ಚಿಸದ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಿದ್ದೀರಿ. ಈಗಲಾದರು ನ್ಯಾಯಸಮ್ಮತವಾಗಿ ಈ ಸರ್ಕಾರ ನಮಗೆ ಮೀಸಲಾತಿ ನೀಡಬೇಕಿದೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮೀಸಲಾತಿ ಹೆಚ್ಚಿಸ್ತೀವಿ ಅಂತ ಶಾಸಕ ರಾಜುಗೌಡ ಲಿಂಗಸೂರಲ್ಲಿ ಹೇಳಿದ್ರು ಎಂದರು.