ಕರ್ನಾಟಕ

karnataka

ETV Bharat / state

ಹಣ ಹಂಚಿಕೆಯೇ ನನ್ನ ಸೋಲಿಗೆ ಕಾರಣ: ದಿನೇಶ್ ಕೆ.‌ ಶೆಟ್ಟಿ ಆರೋಪ - ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನರ ಆಪ್ತ ದಿನೇಶ್ ಕೆ. ಶೆಟ್ಟಿ

ಚುನಾವಣೆ ಸೋಲಿನ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನರ ಆಪ್ತ ದಿನೇಶ್ ಕೆ. ಶೆಟ್ಟಿ, ಬಿಜೆಪಿ ಅಭ್ಯರ್ಥಿ ಹಣ ಹಂಚಿದ್ದೇ ನನ್ನ ಸೋಲಿಗೆ ಕಾರಣ ಎಂದು ಆರೋಪಿಸಿದ್ದಾರೆ.

ದಿನೇಶ್ ಕೆ.‌ ಶೆಟ್ಟಿ

By

Published : Nov 20, 2019, 6:53 PM IST

ದಾವಣಗೆರೆ: ಮಹಾನಗರ ಪಾಲಿಕೆಯ 17ನೇ ವಾರ್ಡ್​ನಲ್ಲಿ ಬಿಜೆಪಿ ಅಭ್ಯರ್ಥಿ ಹಣ ಹಂಚಿದ್ದೇ ಸೋಲು ಅನುಭವಿಸಲು ಕಾರಣ. ಇದಕ್ಕೆ ಕಡಿವಾಣ ಹಾಕದ ಜಿಲ್ಲಾಡಳಿತದ ವೈಫಲ್ಯದಿಂದ ನಾನು ಪರಾಜಯ ಹೊಂದಿದೆ ಎಂದು ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನರ ಆಪ್ತ ದಿನೇಶ್ ಕೆ. ಶೆಟ್ಟಿ ಆರೋಪಿಸಿದ್ದಾರೆ.

ಚುನಾವಣೆಯ ಸೋಲಿನ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಅವರು, 24 ಗಂಟೆಯೊಳಗೆ ಹೊರಗಿನವರು ಕ್ಷೇತ್ರ ಬಿಟ್ಟು ಹೋಗಬೇಕಿತ್ತು. ಆದ್ರೆ, ವಾಪಸ್ ಕಳುಹಿಸಲಿಲ್ಲ.‌ ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರೂ ಪ್ರಯೋಜನ ಆಗಲಿಲ್ಲ ಎಂದು ದೂರಿದರು.

ಹಣ ಹಂಚಿಕೆಯೇ ನನ್ನ ಸೋಲಿಗೆ ಕಾರಣ- ದಿನೇಶ್ ಕೆ.‌ ಶೆಟ್ಟಿ

ಸುಮಾರು ಒಂದೂವರೆ ಕೋಟಿ ಖರ್ಚು ಮಾಡಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ಅವರು, ಹಣ, ಟಿವಿ, ಮೊಬೈಲ್, ಮನೆಗೆ ಹತ್ತು ಸಾವಿರ ರೂಪಾಯಿಯಂತೆ ನೀಡಲಾಗಿದೆ. ಚುನಾವಣೆಯಲ್ಲಿ ಗೆಲುವು ಸೋಲು ಸಹಜ ಎಂದು ಹೇಳಿದರು.

ABOUT THE AUTHOR

...view details