ದಾವಣಗೆರೆ :ರೈಲಿನಲ್ಲಿ ಮರೆತು ಹೋಗಿದ್ದ ಸುಮಾರು ₹7.31 ಲಕ್ಷ ಮೌಲ್ಯದ ವಸ್ತುಗಳನ್ನ ರೈಲ್ವೆ ಭದ್ರತಾ ಪಡೆ ಸಿಬ್ಬಂದಿ ಬ್ಯಾಗ್‌ನ ವಾರಸುದಾರರಿಗೆ ವಾಪಸ್ ನೀಡಿದ್ದಾರೆ.
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಶ್ರೀನಿವಾಸರಾಜ್ ಎಂಬುವರು ರೈಲಿನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರು. ನಂತರ ನೆನಪಾಗಿ ರೈಲ್ವೆ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದು ಶೋಧ ನಡೆಸಿದ ಸಿಬ್ಬಂದಿ ಬ್ಯಾಗ್ ಅನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತಲ್ಲದೇ ಅದನ್ನ ಶ್ರೀನಿವಾಸರಾಜ್ಗೆ ತಲುಪಿಸಿದ್ದಾರೆ.
ಶ್ರೀನಿವಾಸ್ ರಾಜ್ ಅವರಿಗೆ ಸೇರಿದ ಬ್ಯಾಗ್ನಲ್ಲಿ 164 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ, ಒಂದು ಮೊಬೈಲ್ ಸೇರಿ ಸುಮಾರು ₹7.31 ಲಕ್ಷ ಮೌಲ್ಯದ ವಸ್ತಗಳಿದ್ದವು. ರೈಲ್ವೆ ಪೊಲೀಸ್ ಭದ್ರತಾ ಪಡೆ ಸಿಬ್ಬಂದಿ ಶ್ರೀನಿವಾಸ ರಾಜ್ ವಸ್ತುಗಳಿದ್ದ ಬ್ಯಾಗ್‌ನ ಹಸ್ತಾಂತರಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರು ಗ್ರಾಮದ ನಿವಾಸಿ ಶ್ರೀನಿವಾಸರಾಜ್ ಅವರು ಮೈಸೂರು-ಸೊಲ್ಲಾಪುರ ಎಕ್ಸ್ಪ್ರೆಸ್ನಲ್ಲಿ ಬ್ಯಾಗ್ ಬಿಟ್ಟು ಬಂದಿದ್ದರು. ತಕ್ಷಣ ಬ್ಯಾಗ್ ಬಗ್ಗೆ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಓದಿ:ತುಮಕೂರು : ಕೃಷಿ ಹೊಂಡದಲ್ಲಿ ಸಿಲುಕಿ ಇಬ್ಬರು ಚಿಣ್ಣರ ಸಾವು