ಕರ್ನಾಟಕ

karnataka

By ETV Bharat Karnataka Team

Published : Sep 19, 2023, 9:23 PM IST

ETV Bharat / state

ಬೆಳೆಗಾಗಿ ಸಾಲ ಪಡೆದು ಕಟ್ಟದ ವ್ಯಕ್ತಿ.. ಶ್ಯೂರಿಟಿ ನೀಡಿದ್ದ ವೃದ್ಧನ ಮಾಸಾಶನ ತಡೆಹಿಡಿದ ಬ್ಯಾಂಕ್

ದಾವಣಗೆರೆಯಲ್ಲಿ ವ್ಯಕ್ತಿಯೋರ್ವ ಬೆಳೆಗಾಗಿ ಸಾಲ ಪಡೆದು ಕಟ್ಟದ ಹಿನ್ನೆಲೆ ಶ್ಯೂರಿಟಿ ನೀಡಿದ್ದ ವೃದ್ಧ ಮಾಸಾಶನ ಬ್ಯಾಂಕ್​ ತಡೆಹಿಡಿದಿದೆ. ಇದರಿಂದ ವೃದ್ಧರು ಪರದಾಡುವಂತಾಗಿದೆ.

the-person-didnt-paid-the-loan-taken-from-the-bank-dot-guarantor-salary-was-blocked-by-the-bank
ಬೆಳೆಗಾಗಿ ಸಾಲ ಪಡೆದು ಕಟ್ಟದ ವ್ಯಕ್ತಿ : ಶ್ಯೂರಿಟಿ ನೀಡಿದ್ದ ವೃದ್ಧನ ಸಂಬಳ ತಡೆ ಹಿಡಿದ ಬ್ಯಾಂಕ್

ಬೆಳೆಗಾಗಿ ಸಾಲ ಪಡೆದು ಕಟ್ಟದ ವ್ಯಕ್ತಿ : ಶ್ಯೂರಿಟಿ ನೀಡಿದ್ದ ವೃದ್ಧನ ಮಾಸಾಶನ ಹಿಡಿದ ಬ್ಯಾಂಕ್

ದಾವಣಗೆರೆ : ವ್ಯಕ್ತಿಯೋರ್ವ ಬ್ಯಾಂಕಿನಿಂದ ಸಾಲ ಪಡೆದು ಕಟ್ಟದ ಹಿನ್ನೆಲೆ ಶ್ಯೂರಿಟಿ ನೀಡಿದ್ದ ವೃದ್ಧರೊಬ್ಬರ ಸಂಬಳ ಮತ್ತು ಮಾಸಾಶನವನ್ನು ಬ್ಯಾಂಕ್​ನವರು​ ತಡೆಹಿಡಿದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಇದರಿಂದ ವೃದ್ಧ ಅಸಹಾಯಕರಾಗಿದ್ದು, ನ್ಯಾಯ ಒದಗಿಸುವಂತೆ ಕೇಳಿಕೊಂಡಿದ್ದಾರೆ.

ದಾವಣಗೆರೆ ತಾಲೂಕಿನ ಕಬ್ಬೂರು ಗ್ರಾಮದ ಷಡಕ್ಷರಪ್ಪ (80) ಎರಡು ತಿಂಗಳಿನಿಂದ ಮಾಸಾಶನ ಸಿಗದೇ ಪರದಾಡುತ್ತಿದ್ದಾರೆ. ಇದರ ಜೊತೆಗೆ ಷಡಕ್ಷರಪ್ಪ ಅವರಿಗೆ ಬರಬೇಕಾದ ಎರಡು ತಿಂಗಳ ಸಂಧ್ಯಾ ಸುರಕ್ಷಾ ಯೋಜನೆಯ 1200 ರೂಪಾಯಿ ಹಣವನ್ನು ಬ್ಯಾಂಕ್ ಸಿಂಬ್ಬಂದಿ ತಡೆಹಿಡಿದಿದ್ದಾರೆ. ಈ ಬಗ್ಗೆ ಬ್ಯಾಂಕ್​ ಸಿಬ್ಬಂದಿಯನ್ನು ಕೇಳಿದರೆ ಶ್ಯೂರಿಟಿ ನೀಡಿದ ವ್ಯಕ್ತಿಗೆ ಸಾಲ ಕಟ್ಟಲು ಹೇಳು. ಆಗ ಸಂಬಳ ಬರುವಂತೆ ಮಾಡುತ್ತೇವೆ ಎಂದು ಸಿಬ್ಬಂದಿ ವೃದ್ಧನನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂದು ವೃದ್ಧ ಆರೋಪಿಸಿದ್ದಾರೆ.

2016ರಲ್ಲಿ ಆನಂದಪ್ಪ ಎಂಬುವರು ಇಲ್ಲಿನ ಬ್ಯಾಂಕ್​ನಿಂದ 2.40 ಲಕ್ಷ ರೂಪಾಯಿ ಬೆಳೆ ಸಾಲ ಪಡೆದಿದ್ದರು.‌ ಸಾಲದ ಶ್ಯೂರಿಟಿಗೆ ಷಡಕ್ಷರಪ್ಪ ಅವರಿಂದ ಸಹಿ ಹಾಕಿಸಿಕೊಂಡಿದ್ದರು. ಆನಂದಪ್ಪ ಸಾಲ ಕಟ್ಟದೆ ಇರುವುದರಿಂದ ಬ್ಯಾಂಕ್ ಸಿಬ್ಬಂದಿ ಶ್ಯೂರಿಟಿ ಹಾಕಿದ್ದ ಷಡಕ್ಷರಪ್ಪಗೆ ಬರಬೇಕಾದ ಸಂಧ್ಯಾ ಸುರಕ್ಷಾ ಯೋಜನೆಯ ಹಣ ತಡೆ ಹಿಡಿದಿದ್ದಾರೆ. ಇದರಿಂದ ಹಣ ಇಲ್ಲದ ಕಾರಣ ಷಡಕ್ಷರಪ್ಪ ಪರದಾಡುವಂತಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಷಡಕ್ಷರಪ್ಪ, ಬ್ಯಾಂಕ್​ನವರು ಎರಡು ತಿಂಗಳಿಂದ ಸಂಬಳವನ್ನು ನಿಲ್ಲಿಸಿದ್ದಾರೆ. ನಾನು ಅವರ ಸಾಲಕ್ಕೆ ಶ್ಯೂರಿಟಿ ಹಾಕಿದ ಹಿನ್ನೆಲೆ ಸಂಬಳ ನಿಲ್ಲಿಸಿದ್ದಾರೆ. ಅವರು ಸಾಲ ಕಟ್ಟಲಿ ಸಂಬಳ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಸಾಲ ಕಟ್ಟುತ್ತಿಲ್ಲ. ನನಗೆ ಕೊಡಗನೂರಿನಲ್ಲಿರುವ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನವರು ಸಂಬಳ ಕೊಡುತ್ತಿಲ್ಲ. ಒಂಬತ್ತು ತಿಂಗಳ ಪೈಕಿ 07 ತಿಂಗಳ ಸಂಬಳ ಬಂದಿದೆ. ಅವರು ಸಾಲ ಕಟ್ಟಿಲ್ಲ ಎಂದು ಎರಡು ತಿಂಗಳ ಸಂಬಳ ನಿಲ್ಲಿಸಿದ್ದಾರೆ‌. ನಮಗೆ ಆಸ್ಪತ್ರೆಗೆ ಮಾತ್ರೆ ಖರ್ಚಿಗಾಗಿ ಹಣದ ಅವಶ್ಯಕತೆ ಇದೆ ಎಂದು ಹೇಳಿದರು.

ಇದಕ್ಕೆ ಸಾಲ ಪಡೆದ ಆನಂದಪ್ಪ ಪ್ರತಿಕ್ರಿಯಿಸಿ, 2016ರಲ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್​ನಿಂದ 2.40 ಲಕ್ಷ ಸಾಲ ಪಡೆದಿದ್ದೆ. ಷಡಕ್ಷರಪ್ಪನವರು ನಮಗೆ ಶ್ಯೂರಿಟಿ ಹಾಕಿದ್ದರು. ನಾನು ಅವರಿಗೆ ಶ್ಯೂರಿಟಿ ಹಾಕಿದ್ದೆ. ಸಿಎಂ ಕುಮಾರಸ್ವಾಮಿ ಆಡಳಿತಾವಧಿಯಲ್ಲಿ 2 ಲಕ್ಷ ಸಾಲ ಮನ್ನಾ ಮಾಡಲಿಲ್ಲ. ಅದಕ್ಕೆ ನಾನು ಸಾಲ ಕಟ್ಟಲಿಲ್ಲ. ಬಳಿಕ ಕೊರೊನಾ ವೇಳೆಯಲ್ಲಿ ಬೆಳೆ ಬಾರದ ಹಿನ್ನೆಲೆಯಲ್ಲಿ ಸಾಲ ಕಟ್ಟಲಿಲ್ಲ ಎಂದು ಹೇಳಿದರು.

ನಮ್ಮ ತಂದೆಯವರ ಹೆಸರಿನಲ್ಲಿ ಸಾಲ ಇದ್ದು, ಅವರು ಸಾವನ್ನಪ್ಪಿದ್ದಾರೆ. ಜಮೀನು ಪಹಣಿ ಅವರ ಹೆಸರಿನಲ್ಲಿದೆ. ನಾನು ಸಾಲ ಕಟ್ಟಿದರೂ ಅವರು ರಿನಿವಲ್ ಮಾಡುವುದಿಲ್ಲ. ನಾನು ಕೆಲ ಕಾಲ ಸಮಯ ಕೊಡಿ ಎಂದು ಹೇಳಿದ್ದೇನೆ. ಆದರೆ ಕೊಟ್ಟಿಲ್ಲ. ಇನ್ನು ಷಡಕ್ಷರಪ್ಪನವರಿಗೆ ಸಮಸ್ಯೆ ಆಗ್ತಿದೆ. ಆ ಸಾಲ ಕಟ್ಟಲು ನಾನು ಸಿದ್ಧನಿದ್ದೇನೆ. ಆದರೆ ಬ್ಯಾಂಕಿನವರು ರಿನಿವಲ್ ಕೊಡುವುದಿಲ್ಲ ಎನ್ನುತ್ತಿದ್ದಾರೆ ಎಂದರು.

ಇದನ್ನೂ ಓದಿ :ಗಂಗಾವತಿ: ಅಳಿವಿನಂಚಿನಲ್ಲಿರುವ ಅಪರೂಪದ ಆಮೆ ರಕ್ಷಿಸಿದ ಮಕ್ಕಳು

ABOUT THE AUTHOR

...view details