ಕರ್ನಾಟಕ

karnataka

ETV Bharat / state

ನಿಧಿ ಆಸೆಗಾಗಿ ಮೂರ್ತಿಯನ್ನೇ ಒಡೆಯಲು ಯತ್ನಿಸಿದ ದುಷ್ಕರ್ಮಿಗಳು.. - ನಿಧಿ

ಹರಪ್ಪನಹಳ್ಳಿ ತಾಲೂಕಿನ ಕೆರೆಗುಡಿಹಳ್ಳಿಯಲ್ಲಿ ಕೆಲ ಕಿಡಿಗೇಡಿಗಳು ನಿಧಿ ಆಸೆಗಾಗಿ ಬಸವಣ್ಣನ ವಿಗ್ರಹವನ್ನು ಹಾಳುಗೆಡವಿದ್ದಾರೆ.

ಬಸವಣ್ಣನ ಮೂರ್ತಿ

By

Published : Aug 6, 2019, 8:52 PM IST

ದಾವಣಗೆರೆ:ನಿಧಿ ಆಸೆಗಾಗಿ ಬಸವಣ್ಣನ ಮೂರ್ತಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಲು ಯತ್ನ ನಡೆಸಿರುವ ಘಟನೆ ಹರಪ್ಪನಹಳ್ಳಿ ತಾಲೂಕಿನ ಕೆರೆಗುಡಿ ಹಳ್ಳಿಯಲ್ಲಿ ನಡೆದಿದೆ. ಈ ಕುರಿತು ಶೀಘ್ರ ಕ್ರಮಕೈಗೊಳ್ಳುವಂತೆ ಉಪತಹಶೀಲ್ದಾರರಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಉಪತಹಶೀಲ್ದಾರರಿಗೆ ಮನವಿ ಮಾಡಿದ ಗ್ರಾಮಸ್ಥರು..

ಐತಿಹಾಸಿಕ ಹಿನ್ನಲೆಯುಳ್ಳ. ಸುಮಾರು ಎಂಟು ಅಡಿ ಎತ್ತರವಿರುವ ಬಸವಣ್ಣನ ಮೂರ್ತಿಯನ್ನು ನಿಧಿಯಾಸೆಗೆ ವಿವಿಧ ಆಯುಧಗಳಿಂದ ಹಲ್ಲೆ ನಡೆಸಿ ಪದೇಪದೆ ಮೂರ್ತಿ ಹಾಳು ಮಾಡುತ್ತಿದ್ದಾರೆ. ಕಿವಿ ಸೇರಿದಂತೆ ವಿವಿಧ ಭಾಗಗಳನ್ನು ಒಡೆದು ಹಾಕಿದ್ದು, ಉಚ್ಚೆಂಗಿದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗಷ್ಟೇ ಉಚ್ಚಂಗಿದುರ್ಗದಲ್ಲಿ ಜೈನ ತೀರ್ಥಂಕರ ಮೂರ್ತಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದರು. ದೇವಸ್ಥಾನಗಳನ್ನ ಪದೇಪದೆ ಈ ರೀತಿಯ ಕಿಡಿಕೇಡಿಗಳು ವಿಕೃತಗೊಳಿಸುವ ಪ್ರಯತ್ನ ನಡೆದಿದ್ದು, ಪೊಲೀಸ್ ಇಲಾಖೆ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ABOUT THE AUTHOR

...view details