ಕರ್ನಾಟಕ

karnataka

ETV Bharat / state

ನಿಮಜ್ಜನ ಮೆರವಣಿಗೆ ವೇಳೆ ಗಣೇಶನಿಗೆ ಹೂವಿನ ಹಾರ ಹಾಕಿ ಭಾವೈಕ್ಯತೆ ಮೆರೆದ ಮುಸ್ಲೀಂ​ ಬಾಂಧವರು - ಸಚಿವ ಎಸ್ ಎಸ್ ಮಲ್ಲಿಕಾರ್ಜುನ್

ದಾವಣಗೆರೆ ನಗರದ ವಿನೋಬ ನಗರ ಮಹಾಗಣಪತಿ ನಿಮಜ್ಜನ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು. ಮಸೀದಿ ಬಳಿ ಮುಸ್ಲಿಂ ಮುಖಂಡ ಗಣೇಶನಿಗೆ ಹೂವಿನ ಹಾರ ಹಾಕುವ ಮೂಲಕ ಭಾವೈಕ್ಯತೆ ಮೆರೆದರು.

ಮಹಾಗಣಪತಿ ನಿಮಜ್ಜನ ಮೆರವಣಿಗೆ

By

Published : Sep 11, 2019, 4:53 AM IST

ದಾವಣಗೆರೆ: ನಗರದ ವಿನೋಬ ನಗರ ಮಹಾಗಣಪತಿ ನಿಮಜ್ಜನ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು. ಮಸೀದಿ ಬಳಿಗೆ ಮೆರವಣಿಗೆ ಬರುತ್ತಿದ್ದಂತೆ ಮುಸ್ಲಿಂ ಮುಖಂಡರು ಗಣೇಶನಿಗೆ ಹೂವಿನ ಹಾರ ಹಾಕುವ ಮೂಲಕ ಭಾವೈಕ್ಯತೆ ಮೆರೆದರು.

ಗಣೇಶ ನಿಮಜ್ಜನ ವೇಳೆ ಕಂಡು ಬಂದ ಜನಸ್ತೋಮ
ನಗರದ ವಿನೋಬನಗರದಿಂದ ಹೊರಟ ಮೆರವಣಿಗೆ ವಿವಿಧ ರಾಜಬೀದಿಗಳಲ್ಲಿ ಸಂಚರಿಸಿತು. ಸೂಕ್ಷ್ಮ ಪ್ರದೇಶವಾಗಿರುವ ವಿನೋಬನಗರದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಸ್ವತಹ ಜಿಲ್ಲಾಧಿಕಾರಿ ಮಹಾಂತೇಶ್ ಬಿಳಿಗಿ ಹಾಗೂ ಎಸ್ಪಿ ಹನುಮಂತರಾಯ ಮಸೀದಿ ಮುಂಭಾಗ ನಿಂತು ಮೆರವಣಿಗೆ ವೀಕ್ಷಣೆ ಮಾಡುತ್ತಾ ಎಚ್ಚರಿಕೆ ವಹಿಸಿದ್ದರು.

ಕೆಲವೆಡೆ ತಳ್ಳಾಟ, ನೂಕಾಟ ಕಂಡು ಬಂತು. ಇನ್ನೂ ಮೆರವಣಿಗೆಗೆ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಚಾಲನೆ ನೀಡಿದ್ದು, ಮೆರವಣಿಗೆಗೆ ವಿವಿಧ ಕಲಾ ತಂಡಗಳು ಮೆರಗು ನೀಡಿದವು. ಇನ್ನೂ ಟಪ್ಪಾಂಗುಚಿ ಡಿಜೆ ಸಾಂಗ್​ಗೆ​ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ABOUT THE AUTHOR

...view details