ಕರ್ನಾಟಕ

karnataka

ETV Bharat / state

ದಾವಣಗೆರೆ: ಗಣರಾಜ್ಯೋತ್ಸವ ಧ್ವಜಾರೋಹಣ ವೇಳೆ ಮೇಯರ್​​​​ ಕಡೆಗಣನೆ? - ದಾವಣಗೆರೆ ಮೇಯರ್ ಅಜಯ್ ಕುಮಾರ್

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ನಡೆಸುತ್ತಿದ್ದ ಧ್ವಜಾರೋಹಣ ವೇದಿಕೆಗೆ ಮೇಯರ್​​ಗೆ ಅವಕಾಶ ಕಲ್ಪಿಸದ ಜಿಲ್ಲಾಡಳಿತ, ಕಾನೂನು ಪಾಲನೆ ವಿಚಾರ ಇಟ್ಟುಕೊಂಡು ಮೇಯರ್ ಅವರನ್ನೇ ಹಿಂದಕ್ಕೆ ಕಳುಹಿಸಿತ್ತಂತೆ. ಇದರಿಂದ ಬೇಸರಗೊಂಡು ಮೇಯರ್ ಗೌನ್ ಕಳಚಿ ಜನ ಸಾಮಾನ್ಯರಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಂತೆ.

ajay kumar
ಅಜಯ್ ಕುಮಾರ್

By

Published : Jan 28, 2021, 8:39 PM IST

ದಾವಣಗೆರೆ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದಾವಣಗೆರೆ ಮೇಯರ್​​ಗೆ ಅವಮಾನ ಮಾಡಲಾಯಿತಾ ಎಂಬ ಪ್ರಶ್ನೆ ಮೂಡುತ್ತಿದೆ. ಇದಕ್ಕೆ ಕಾರಣವಾಗಿದ್ದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 26ರಂದು ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮ.

ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡುವ ವೇಳೆ ಅಜಯ್ ಕುಮಾರ್ ಅವರಿಗೆ ಅವಕಾಶ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಶಿಷ್ಟಾಚಾರ ಕಡೆಗಣಿಸಲಾಗಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಗಣರಾಜ್ಯೋತ್ಸವ ಧ್ವಜಾರೋಹಣ ವೇಳೆ ಮೇಯರ್​​​ ಕಡೆಗಣನೆ ಆರೋಪ ಕುರಿತು ಮೇಯರ್ ಸ್ಪಷ್ಟನೆ

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ನಡೆಸುತ್ತಿದ್ದ ಧ್ವಜಾರೋಹಣ ವೇದಿಕೆಗೆ ಮೇಯರ್​​ಗೆ ಅವಕಾಶ ಕಲ್ಪಿಸದ ಜಿಲ್ಲಾಡಳಿತ, ಕಾನೂನು ಪಾಲನೆ ವಿಚಾರ ಇಟ್ಟುಕೊಂಡು ಮೇಯರ್ ಅವರನ್ನೆ ಹಿಂದಕ್ಕೆ ಕಳುಹಿಸಿತ್ತಂತೆ. ಇದರಿಂದ ಬೇಸರಗೊಂಡು ಮೇಯರ್ ಗೌನ್ ಕಳಚಿ ಜನಸಾಮಾನ್ಯರಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಂತೆ.

ಇದನ್ನೂ ಓದಿ: ಕಲಬುರಗಿ: ಮ್ಯಾನ್​ ಹೋಲ್ ಸ್ವಚ್ಛಗೊಳಿಸಲು ಇಳಿದ ಇಬ್ಬರು ಉಸಿರುಗಟ್ಟಿ ಸಾವು

ABOUT THE AUTHOR

...view details