ಕರ್ನಾಟಕ

karnataka

ETV Bharat / state

ಪ್ರೀತಿ ಮಾಡಿ ಮದುವೆಯಾದ.. ಕೆಲವೇ ದಿನಗಳ ಬಳಿಕ ಕತ್ತು ಹಿಸುಕಿ ಕೊಂದ - The husband murdered his wife in harihara

ಪ್ರೀತಿ ಮಾಡಿ ಮದುವೆಯಾಗಿದ್ದ ಪತ್ನಿಯನ್ನು ಕತ್ತು ಹಿಸುಕಿ ಪತಿಯೇ ಕೊಲೆ ಮಾಡಿದ ಘಟನೆ, ಹರಿಹರ ತಾಲೂಕಿನ ಹಿಂಡಸಗಟ್ಟ ಗ್ರಾಮದಲ್ಲಿ ನಡೆದಿದೆ.

ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಪತಿ
ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಪತಿ

By

Published : Dec 17, 2019, 5:15 PM IST

ದಾವಣಗೆರೆ: ಪ್ರೀತಿ ಮಾಡಿ ಮದುವೆಯಾಗಿದ್ದ ಪತ್ನಿಯ ಕತ್ತು ಹಿಸುಕಿ ಪತಿಯೇ ಕೊಲೆ ಮಾಡಿದ ಘಟನೆ ಹರಿಹರ ತಾಲೂಕಿನ ಹಿಂಡಸಗಟ್ಟ ಗ್ರಾಮದಲ್ಲಿ ನಡೆದಿದೆ. 21ವರ್ಷದ ರಂಜಿತಾ ಕೊಲೆಯಾಗಿದ್ದು, ಆರೋಪಿ ಪತಿ ನಾಗರಾಜ್ ನಾಯ್ಕ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಹೂದೋಟಕ್ಕೆ ತನ್ನ ಪತ್ನಿ ರಂಜಿತಾಳನ್ನು, ನಾಗರಾಜ್ ನಾಯ್ಕ್ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಯಾವುದೋ ವಿಷಯಕ್ಕೆ ಗಲಾಟೆಯಾಗಿದ್ದು, ಮಾತಿಗೆ ಮಾತು ಬೆಳೆದು ರಂಜಿತಾಳ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ.

ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಪತಿ

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪೋಷಕರ ವಿರೋಧದ ನಡುವೆ ಪ್ರೀತಿ ಮಾಡುತ್ತಿದ್ದ ರಂಜಿತಾ ಹಾಗೂ ನಾಗರಾಜ್ ವಿವಾಹವಾಗಿದ್ದರು.‌ ಬಳಿಕ ಸ್ವಗ್ರಾಮದಲ್ಲಿ ವಾಸವಾಗಿದ್ದರು.‌ ಇನ್ನು ಈ ಕುರಿತು ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details