ಕರ್ನಾಟಕ

karnataka

ETV Bharat / state

ಎಲ್ಲ ಕ್ಯಾಸಿನೋಗಳಲ್ಲಿ ಡ್ರಗ್ಸ್​ ಇರಲ್ಲ, ಅಲ್ಲಿ ಡ್ಯಾನ್ಸ್​ ಮಾಡುವುದು ಅಪರಾಧವಲ್ಲ: ಶಾಮನೂರು ಶಿವಶಂಕರಪ್ಪ - Shamanoor Shivasankarappa Comment on Drugs News

ಡ್ರಗ್ಸ್​ನ ಸುದ್ದಿ ನಮಗ್ಯಾಕೆ ಎಂದು ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮಾಧ್ಯಮದವರ ಮುಂದೆ ಹೇಳಿದ್ದಾರೆ.

Davangere
ಶಾಮನೂರು ಶಿವಶಂಕರಪ್ಪ

By

Published : Sep 15, 2020, 8:29 PM IST

Updated : Sep 15, 2020, 8:47 PM IST

ದಾವಣಗೆರೆ: ಉಪ್ಪು ತಿಂದವರು ನೀರು ಕುಡಿತಾರೆ. ಡ್ರಗ್ಸ್​ನ ಸುದ್ದಿ ನಮಗ್ಯಾಕೆ ಎಂದು ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಮಗೆ ಆಗೋದಿಲ್ಲ ಎಂದರೆ ನಮ್ಮ ಹೆಸರು ಹೇಳುತ್ತಾರೆ. ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ ಮಾಡುತ್ತಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ ಎಂದು ಜಮೀರ್ ಅಹಮದ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು‌.

ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ

ಡ್ರಗ್ಸ್ ತೆಗೆದುಕೊಂಡು ಹೆಂಗಸರ ಜೊತೆ ನಾಟ್ಯ, ಮಾರಾಟ ಮಾಡಿದರೆ ತಪ್ಪು. ಡ್ಯಾನ್ಸ್ ಮಾಡಿದರೆ ಅಪರಾಧ ಆಗುತ್ತಾ? ಕ್ಯಾಸಿನೋದಲ್ಲಿ ಡ್ರಗ್ಸ್ ಇರುವುದಿಲ್ಲ. ಅಲ್ಲಿ ಜೂಜಾಟ ಇರುತ್ತದೆ. ಜೂಜಾಟಕ್ಕೆ ಹೋಗಿ ಬಂದವರಿಲ್ಲವಾ ಎಂದು ಹೇಳಿದರು.

ಇನ್ನು ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಪ್ರಯತ್ನ ನಡೆಯುತ್ತಿದೆಯಲ್ಲವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಪಕ್ಷಕ್ಕೆ ಸಂಬಂಧಿಸಿದ್ದು. ನಾನ್ಯಾಕೆ ಪ್ರತಿಕ್ರಿಯೆ ನೀಡಬೇಕು ಎಂದರು.

Last Updated : Sep 15, 2020, 8:47 PM IST

For All Latest Updates

ABOUT THE AUTHOR

...view details