ದಾವಣಗೆರೆ: ದೋಸ್ತಿ ಸರ್ಕಾರ ಆಗ ಬೀಳುತ್ತೆ, ಈಗ ಬೀಳುತ್ತೆ ಅಂತಾನೆ ಒಂದು ವರ್ಷ ಮುಗಿಯಿತು. ನಾಲ್ಕು ಜನ ಅಲ್ಲಿಗೆ ಹೋದರು, ಎಂಟು ಜನ ಇಲ್ಲಿಗೆ ಹೋದರು ಎನ್ನುತ್ತಲೇ ನಾಲ್ಕು ವರ್ಷವೂ ಸಮ್ಮಿಶ್ರ ಸರ್ಕಾರದ ಆಡಳಿತ ಪೂರೈಸುತ್ತದೆ. ಗಾಳಿಯಲ್ಲಿ ವಿಮಾನ ಹೋದಂತೆ ಸಮ್ಮಿಶ್ರ ಸರ್ಕಾರ ಅಲುಗಾಡುತ್ತಲೇ ಹೋಗುತ್ತದೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಸರ್ಕಾರ ಆಗ ಬೀಳುತ್ತೆ, ಈಗ ಬೀಳುತ್ತೆ ಅಂತಾನೆ ಒಂದು ವರ್ಷ ಮುಗಿಯಿತು.. ಸಚಿವ ಸತೀಶ್ ಜಾರಕಿಹೊಳಿ - state governamet
ಸಚಿವ ಸಂಪುಟ ವಿಸ್ತರಣೆಯಿಂದ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಕೆಲವರು ಸಿನಿಯಾರಿಟಿ ಪ್ರಕಾರ ಕೇಳುತ್ತಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಸತೀಶ್ ಜಾರಕಿಹೊಳಿ
ದಾವಣಗೆರೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 4 ವರ್ಷ ಹೆಚ್ ಡಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು. ಸಮ್ಮಿಶ್ರ ಸರ್ಕಾರ ಎಂದ ಮೇಲೆ ಅಡೆತಡೆ ಅಸಮಾಧಾನ ಸಾಮಾನ್ಯ. ಈ ನಡುವೆಯೂ ನಮ್ಮ ಸರ್ಕಾರ ಸುಭದ್ರವಾಗಿ 4 ವರ್ಷ ಪೂರೈಸಲಿದೆ ಎಂದರು. ರಮೇಶ್ ಜಾರಕಿಹೊಳಿ ಕುರಿತು ಮಾತಾಡಿದ ಅವರು, ಸದ್ಯ ಅವರ ತಟಸ್ಥರಾಗಿದ್ದಾರೆ, ಮುಂದಿನ ನಡೆ ಗೊತ್ತಿಲ್ಲ ಎಂದರು.