ದಾವಣಗೆರೆ:ಮಲೆನಾಡಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ತುಂಗಾಭದ್ರ ಹೊಳೆ ಉಕ್ಕಿ ಹರಿಯುತ್ತಿರುವುದರಿಂದ ನದಿಯ ತಟದಲ್ಲಿರುವ ಹಳ್ಳಿಗಳು ಸಂಪೂರ್ಣ ಜಲಾವೃತವಾಗುವ ಸಾಧ್ಯತೆಯಿದ್ದು, ಕೆಲ ಗ್ರಾಮಗಳ ಸಂಪರ್ಕ ಕಡಿತವಾಗಿವೆ.
ಮುಳುಗಿದ ಸೇತುವೆಯಲ್ಲಿ ಬಸ್ ಚಲಾಯಿಸಿದ ಚಾಲಕ...ಆಮೇಲೆ ಏನಾಯ್ತು? - ಮುಖ್ಯಮಂತ್ರಿ ಸಂತ್ರಸ್ತರ ಪರಿಹಾರ ನಿಧಿ
ಮುಳುಗಿದ ಸೇತುವೆಯಲ್ಲಿಯೇ ಕೆಎಸ್ಆರ್ಟಿಸಿ ಬಸ್ ಚಾಲಕ ಸೇತುವೆಯ ಮೇಲೆ ಸರಾಗವಾಗಿ ಬಸ್ ಚಲಾಯಿಸಿ ದಡ ಸೇರಿರುವ ವಿಡಿಯೋ ವೈರಲ್ ಆಗಿದೆ.
The driver who ran the bus on the sunken bridge
ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕಡತಿ, ಹಲವಾಗಲು ಗ್ರಾಮಗಳ ಸಂಪರ್ಕ ಸೇತುವೆ ಸಂಪೂರ್ಣವಾಗಿ ಮುಳುಗಿದೆ. ಆದರೆ, ಇದನ್ನು ಲೆಕ್ಕಿಸದ ಕೆಎಸ್ಆರ್ಟಿಸಿ ಬಸ್ ಚಾಲಕ ಸೇತುವೆಯ ಮೇಲೆ ಸರಾಗವಾಗಿ ಬಸ್ ಚಲಾಯಿಸಿ ದಡ ಸೇರಿದ್ದಾರೆ.