ದಾವಣಗೆರೆ: ಕೈಕಾಲು ಸ್ವಾಧೀನ ಕಳೆದುಕೊಂಡು ಹಾಸಿಗೆಯಲ್ಲೇ ಜೀವನ ಸಾಗಿಸುತ್ತಿರುವ ದಿವ್ಯಾಂಗನನ್ನು ಗುರುತಿಸಿ ನೂತನ ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಪಿಂಚಣಿ ಪತ್ರ ವಿತರಿಸಿದ್ದಾರೆ.
ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಪಂಚಾಯಿತಿ ವ್ಯಾಪ್ತಿಯ ಜ್ಯೋತಿಪುರ ಗ್ರಾಮದ ನಿವಾಸಿ ಸತೀಶ್ ನಾಯ್ಕ್ (30) ಎಂಬವರ ಮನೆಗೆ ತೆರಳಿ ಮಾಸಾಶನ ಆದೇಶ ಪತ್ರ ವಿತರಿಸಿದರು. ಜೊತೆಗೆ ಸಂತ್ರಸ್ತ ಅಂಗವಿಕಲ ಪೋಷಣಾ ವೇತನದ ಮಂಜೂರಾತಿ ಆದೇಶ ಪತ್ರ ಹಾಗೂ ಆಧಾರ್ ಕಾರ್ಡ್ ಅನ್ನು ವಿತರಿಸಿದರು.