ದಾವಣಗೆರೆ: ಅನೈತಿಕ ಸಂಬಂಧ ಮಹಿಳೆಯ ಕೊಲೆ ಮಾಡಿದ ಆರೋಪಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ.
ಆರೋಪ ಸಾಬೀತಾದ ಹಿನ್ನೆಲೆ ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಿ ಶಿಕ್ಷೆ ಪ್ರಕಟವಾಗಿದೆ.

ಗದಿಗೆಮ್ಮ (35) ಕೊಲೆಯಾದ ಮಹಿಳೆ. ಹರಿಹರ ತಾಲೂಕಿನ ಯಲವಟ್ಟಿ ಗ್ರಾಮದಲ್ಲಿ 17 ಸಪ್ಟೆಂಬರ್ 2016 ರಂದು ಈ ಕೊಲೆ ನಡೆದಿತ್ತು. ರೊಳ್ಳಿ ಪರಮೇಶ್ವರಪ್ಪ (45) ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಪರಮೇಶ್ವರಪ್ಪನು ಗದಿಗೆಮ್ಮ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಗ್ರಾಮದ ತುಂಬೆಲ್ಲ ಪ್ರಚಾರ ಆಗಿತ್ತು. ಗದಿಗೆಮ್ಮಳೇ ಈ ಸುದ್ದಿ ಸಾರಿದ್ದಾಳೆ ಎಂದು ತಿಳಿದು, ಸೀರೆಯಿಂದ ಆಕೆ ಕುತ್ತಿಗೆಗೆ ಬಿಗಿದು ಪರಮೇಶ್ವರ್ ಕೊಲೆ ಮಾಡಿದ್ದಾನೆ ಎಂದು ಹರಿಹರ ತಾಲೂಕಿನ ಮಲೇಬೆನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಆರೋಪ ಸಾಬೀತಾದ ಹಿನ್ನೆಲೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅಂಬಾದಾಸ್ ಕುಲಕರ್ಣಿ ಆದೇಶ ಪ್ರಕಟಿಸಿದ್ದಾರೆ.