ದಾವಣಗೆರೆ : ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಕಾಂಗ್ರೆಸ್ ಸೇರಲ್ಲ. ಸೌಹಾರ್ದಯುತ ಭೇಟಿ ಅಷ್ಟೇ. ಎಲ್ಲರನ್ನೂ ಕಂಡಿದ್ದರು. ನನ್ನ ಬಳಿ ಬಂದಿದ್ದರು. ಟೀ ಕುಡಿದರು, ವಿಶ್ ಮಾಡಿ ಹೋದ್ರು. ಇದಕ್ಕೆ ರಾಜಕೀಯ ಅರ್ಥ ಬೇಡ, ಟೀ ಕುಡಿಸಿ ಕಳುಹಿಸಿದ್ದೇನೆ. ಬೇರೆ ಏನೂ ಚರ್ಚೆ ಆಗಿಲ್ಲ ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ರೇಣುಕಾಚಾರ್ಯ ಭೇಟಿ ಬಗ್ಗೆ ತಿಳಿಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಪಕ್ಷದ ಬಗ್ಗೆ ಮಾತನಾಡಿದ್ರು, ಯಡಿಯೂರಪ್ಪಗೆ ಬಿಜೆಪಿ ಅನ್ಯಾಯ ಮಾಡಿತು ಅಂದ್ರು. ದಾವಣಗೆರೆಯಿಂದ ಲೋಕಸಭೆ ಬಿಜೆಪಿ ಆಕಾಂಕ್ಷಿ ಎಂದು ರೇಣುಕಾಚಾರ್ಯ ಹೇಳಿದ್ರು. ಇನ್ನು ನನಗೂ ಚನ್ನಗಿರಿ ಶಾಸಕ ಬಸವರಾಜ್ ವಿ ಶಿವಗಂಗಾ ಜೊತೆ ವೈಮನಸ್ಸಿಲ್ಲ. ನನ್ನ ಫೋನ್ಗೆ ಕರೆ ಮಾಡಿಲ್ಲ ಎಂದರು.
ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಯಾರೂ ಮಾತನಾಡಿಲ್ಲ. ಡಿ ಕೆ ಶಿವಕುಮಾರ್ ನನಗೆ ಕರೆ ಮಾಡಿಲ್ಲ. ಗೊತ್ತೂ ಇಲ್ಲ, ಈ ಸಂಬಂಧ ನನಗೆ ಯಾರೂ ಮಾತನಾಡಿಲ್ಲ. ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿಲ್ಲ. ಬೇರೆ ಯಾರಾದರೂ ಕಾಂಗ್ರೆಸ್ಗೆ ಬಂದರೆ ಸ್ವಾಗತಿಸುತ್ತೇವೆ. ತತ್ವ, ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ. ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ಬಗ್ಗೆ ಯೋಚನೆ ಇಲ್ಲ, ಈ ಬಗ್ಗೆ ಚರ್ಚೆ ಆಗಿಲ್ಲ. ಕಾಂಗ್ರೆಸ್ನಲ್ಲಿ ಬಹಳಷ್ಟು ಜನರಿದ್ದಾರೆ ಎಂದರು.
ಇನ್ನು, ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರು ಲೋಕಸಭಾ ಚುನಾವಣೆ ಅಭ್ಯರ್ಥಿನಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಜಗಳೂರು ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಕುಟುಂಬ ಆಹ್ವಾನ ಮಾಡಿತ್ತು. ಜಗಳೂರಿಗೆ ಪ್ರಭಾ ಮಲ್ಲಿಕಾರ್ಜುನ್ ಹೋಗಿದ್ದರು. ವರಮಹಾಲಕ್ಷ್ಮೀ ಪೂಜೆಗೆ ಆಹ್ವಾನದ ಮೇರೆಗೆ ಹೋಗಿದ್ದರು ಅಷ್ಟೇ. ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.