ದಾವಣಗೆರೆ:ಆಪರೇಷನ್, ಕಿಡ್ನಾಪ್ ಯಾವುದು ನಡೆಯದೇ, ನೂರಕ್ಕೆ ನೂರರಷ್ಟು ಬಿಜೆಪಿ ಮಹಾನಗರ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯಲಿದ್ದು, ಮೇಯರ್ ಆಯ್ಕೆಯನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಪರೇಷನ್ ಮಾಡದೇ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯಲಿದೆ ಬಿಜೆಪಿ: ಯಶವಂತ್ ರಾವ್ ಜಾದವ್ ಆ ಜಾದು ಯಾವುದು? - ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ
ಯಾವುದೇ ಪಕ್ಷದ ಶಾಸಕರನ್ನು ನಮ್ಮತ್ತ ಸೆಳೆಯದೇ, ಯಾವುದೇ ಆಪರೇಷನ್, ಕಿಡ್ನಾಪ್ ಮಾಡದೇ ದಾವಣಗೆರೆಯಲ್ಲಿ ಮಹಾನಗರ ಪಾಲಿಕೆ ಆಡಳಿತ ಚುಕ್ಕಾಣಿಯನ್ನು ಬಿಜೆಪಿ ಏರಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಶವಂತ್ ರಾವ್ ಜಾದವ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ನಗರದ ಜನ ಬಯಸುತ್ತಿರುವುದು ಬಿಜೆಪಿ ಪಕ್ಷವನ್ನ, ಹೀಗಾಗಿ ಪಾಲಿಕೆ ಆಡಳಿತ ಖಂಡಿತವಾಗಿತಯೂ ಬಿಜೆಪಿಗೆ ಸಿಗಲಿದೆ. ಗೆದ್ದಂತಹ ಬಂಡಾಯ ಅಭ್ಯರ್ಥಿಗಳನ್ನು, ಸೋತವರನ್ನು ಮತ್ತೆ ಪಕ್ಷಕ್ಕೆ ಮರಳಿ ಕರೆತರುತ್ತೇವೆ ಎಂದರು.
ಈಗಾಗಲೇ ಗೆದ್ದ ಬಂಡಾಯ ಅಭ್ಯರ್ಥಿಗಳು ಬಿಜೆಪಿಗೆ ಮರಳಿದ್ದಾರೆ. ಇನ್ನುಳಿದಂತವರಿಗೆ ಪಕ್ಷದಲ್ಲಿ ಸ್ಥಾನಮಾನ ಕೊಟ್ಟು ಕರೆತರಲಿದ್ದೇವೆ. ಈ ಹೊಸ ಪ್ರಯೋಗದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ, ಹೀಗಾಗಿ ಪಾಲಿಕೆ ಆಡಳಿತವನ್ನು ಬಿಜೆಪಿಯೇ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.