ಕರ್ನಾಟಕ

karnataka

ETV Bharat / state

ಏಷ್ಯಾದ ಎರಡನೇ ಅತಿ ದೊಡ್ಡ ಸೂಳೆಕೆರೆ ಭರ್ತಿ: ಸಂತಸದಲ್ಲಿ ಅನ್ನದಾತರು - ದಾವಣಗೆರೆ ಜಿಲ್ಲೆಯ ದೊಡ್ಡ ಕೆರೆ ಸೂಳೆಕೆರೆ ಭರ್ತಿ

ಚನ್ನಗಿರಿ ತಾಲೂಕಿನ‌ ಸೂಳೆಕೆರೆ ಮೈದುಂಬಿದ ಹಿನ್ನೆಲೆಯಲ್ಲಿ ಸಂಸದ ಜಿ. ಎಂ. ಸಿದ್ದೇಶ್ವರ್, ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಸೇರಿದಂತೆ ಬಿಜೆಪಿ ಮುಖಂಡರು, ರೈತ ಮುಖಂಡರು, ಸ್ಥಳೀಯರು ಬಾಗಿನ ಅರ್ಪಿಸಿದರು.

The Asia second largest lake Sulekere Is full
ಏಷ್ಯಾ ಖಂಡದ ಎರಡನೇ ದೊಡ್ಡ ಕೆರೆ ಸೂಳೆಕೆರೆ ಭರ್ತಿ

By

Published : Nov 11, 2020, 1:47 PM IST

ದಾವಣಗೆರೆ: ಏಷ್ಯಾ ಖಂಡದ ಎರಡನೇ ಅತಿ ದೊಡ್ಡದಾದ ಚನ್ನಗಿರಿ ತಾಲೂಕಿನ ಸೂಳೆಕೆರೆಯು ಸಂಪೂರ್ಣವಾಗಿ ತುಂಬಿದೆ. ಇದರಿಂದಾಗಿ ಚನ್ನಗಿರಿ ತಾಲೂಕಿನ ರೈತರು ಹಾಗೂ ಚಿತ್ರದುರ್ಗ ಜಿಲ್ಲೆಯ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಕುಡಿಯುವ ನೀರಿನ ಮೂಲಾಧಾರ ಈ ಕೆರೆ. ಲಕ್ಷಾಂತರ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬೆಳೆ ಬೆಳೆಯುವ ರೈತರು ಈ ನೀರನ್ನೇ ಅವಲಂಬಿಸಿದ್ದಾರೆ. ಕೆಲವೇ ಬಾರಿ ಇತಿಹಾಸದಲ್ಲಿ ಈ ಕೆರೆ ಭರ್ತಿಯಾಗಿದ್ದು, ಈ ಬಾರಿ ಕೆರೆಯಲ್ಲಿ ಯಥೇಚ್ಛವಾಗಿ ನೀರು ಸಂಗ್ರಹವಾಗಿರುವುದು ಸಜಹಜವಾಗಿಯೇ ಖುಷಿ ಹೆಚ್ಚಿಸಿದೆ.

ಏಷ್ಯಾ ಖಂಡದ ಎರಡನೇ ದೊಡ್ಡ ಕೆರೆ ಸೂಳೆಕೆರೆ ಭರ್ತಿ, ಬಾಗಿನ ಅರ್ಪಣೆ

ಚನ್ನಗಿರಿ ತಾಲೂಕಿನ‌ ಸೂಳೆಕೆರೆ ಮೈದುಂಬಿದ ಹಿನ್ನೆಲೆಯಲ್ಲಿ ಸಂಸದ ಜಿ. ಎಂ. ಸಿದ್ದೇಶ್ವರ್, ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಸೇರಿದಂತೆ ಬಿಜೆಪಿ ಮುಖಂಡರು, ರೈತ ಮುಖಂಡರು, ಸ್ಥಳೀಯರು ಬಾಗಿನ ಅರ್ಪಿಸಿದರು.

ಈ ವೇಳೆ ಮಾತನಾಡಿದ ಸಂಸದ ಸಿದ್ದೇಶ್ವರ್ ಭೀಮಸಮುದ್ರಕ್ಕೆ ಸೂಳೆಕೆರೆ ನೀರನ್ನು ಹರಿಸುವ ಹುನ್ನಾರ ನಡೆಸಿದ್ದೇನೆ ಎಂಬುದಾಗಿ ಕೆಲವರು ಅಪಪ್ರಚಾರ ನಡೆಸಿದ್ದಾರೆ. ಇದು ಶುದ್ಧ ಸುಳ್ಳು. ಕೆರೆಗೆ ನೀರು ತುಂಬಿಸುವ ಪ್ರಯತ್ನ ನನ್ನದು. ಕೆರೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ವಿನಾ ಈ ಭಾಗದ ಜನರಿಗೆ ತೊಂದರೆ ಆಗುವ ಯಾವ ಕೆಲಸವನ್ನೂ ಮಾಡಲ್ಲವೆಂದು ಸ್ಪಷ್ಟಪಡಿಸಿದರು.

ಸೂಳೆಕೆರೆ ಒತ್ತುವರಿಯಾಗಿರುವ ಕುರಿತಂತೆ ಸಂಘಟೆಯೊಂದು ಹೋರಾಟ ಮಾಡುತ್ತಿದೆ. ಒಳ್ಳೆಯ ಕೆಲಸಕ್ಕೆ ಯಾವಾಗಲೂ ನನ್ನ ಬೆಂಬಲ ಇರುತ್ತದೆ. 2009 ರಲ್ಲಿ ಸೂಳೆಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆ ಇತ್ತು. ಈ ವೇಳೆ ಸಿಎಂ ಯಡಿಯೂರಪ್ಪರ ಜೊತೆ ಮಾತನಾಡಿ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಿದ್ದೆ. ರೈತರ ಹಿತ ಕಾಪಾಡಲು ಶ್ರಮಿಸಿದ್ದೆ. ಆದರೂ ಅಪಪ್ರಚಾರ ನಡೆಸಿದ್ದು ಬೇಸರ ತಂದಿತ್ತು. ಕೆರೆ ಬರಿದಾಗದಂತೆ ನೋಡಿಕೊಳ್ಳಲು ಇನ್ನು ಹೆಚ್ಚಿನ 1 ಟಿಎಂಸಿ ನೀರು ಹರಿಸುವ ಯೋಜನೆ ಅನುಮೋದನೆ ಹಂತದಲ್ಲಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಅನುಮೋದನೆ ನೀಡಲಿದೆ. ಯಾವುದೇ ಕಾರಣಕ್ಕೂ ಸೂಳೆಕೆರೆ ವಿಚಾರದಲ್ಲಿ ಅನ್ಯಾಯ ಆಗಲು ಬಿಡಲ್ಲ. ರಾಜಕೀಯ ಮಾಡಿಲ್ಲ. ಮುಂದೆನೂ ಮಾಡಲ್ಲ ಎಂದು ಹೇಳಿದರು.

For All Latest Updates

ABOUT THE AUTHOR

...view details