ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾಗೆ ಹತ್ತು ಮಂದಿ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 206ಕ್ಕೇರಿದೆ. 263 ಜನರಿಗೆ ಸೋಂಕು ತಗುಲಿದೆ. ಇದುವರೆಗೆ ಒಟ್ಟು 10582 ಸೋಂಕಿತರು ಸೋಂಕು ತಗುಲಿದೆ.
ದಾವಣಗೆರೆಯಲ್ಲಿ ಕೊರೊನಾಗೆ ಹತ್ತು ಬಲಿ: 263 ಜನರಿಗೆ ಸೋಂಕು - corona news
ದಾವಣಗೆರೆಯಲ್ಲಿ ಇಂದು ಕೊರೊನಾಗೆ ಏಳು ಜನ ಸಾವನ್ನಪ್ಪಿದ್ದಾರೆ. 263 ಜನರಿಗೆ ಸೋಂಕು ತಗುಲಿದ್ದು, ಇದುವರೆಗೆ ಒಟ್ಟು 10582 ಸೋಂಕಿತರು ಸೋಂಕು ತಗುಲಿದೆ. ಇಂದು 125 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ.
72 ವರ್ಷದ ವೃದ್ಧ, 66 ವರ್ಷದ ವೃದ್ಧೆ, 62 ವರ್ಷದ ವೃದ್ಧೆ, 43 ವರ್ಷದ ಪುರುಷ, 62 ವರ್ಷದ ವೃದ್ಧ ಆಗಸ್ಟ್ 3 ರಂದು, 45 ವರ್ಷದ ಪುರುಷ, 43 ವರ್ಷದ ಮಹಿಳೆ, 70 ವರ್ಷದ ವೃದ್ಧೆ, 75 ವರ್ಷದ ವೃದ್ಧ ಆಗಸ್ಟ್ 2ರಂದು ಹಾಗೂ 46 ವರ್ಷದ ಮಹಿಳೆ ಆಗಸ್ಟ್ 1 ರಂದು ಕೊರೊನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ತೀವ್ರ ಉಸಿರಾಟ ಸಮಸ್ಯೆ, ಜ್ವರ ಹಾಗೂ ಕಫದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
125 ಜನರು ಕೊರೊನಾ ವೈರಾಣುವಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 7748 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2628 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.