ದಾವಣಗೆರೆ: ರಸ್ತೆಯಲ್ಲಿ ಸಿಕ್ಕ ಚಿನ್ನದ ಮಾಂಗಲ್ಯ ಸರ ಪೊಲೀಸರಿಗೆ ಒಪ್ಪಿಸಿ ಶಿಕ್ಷಕ ದಂಪತಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸುಮಾರು ಮೂರು ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನದ ಮಾಂಗಲ್ಯ ಸರ ಇದಾಗಿದ್ದು, ಶ್ರೀನಿವಾಸ- ಪೂರ್ಣಿಮಾ ಸಿಕ್ಕ ಸರವನ್ನು ಪೊಲೀಸರ ಕೈಗೆ ಒಪ್ಪಿಸಿದ ಶಿಕ್ಷಕ ದಂಪತಿಗಳು.
ಶಾಲೆ ಮುಗಿಸಿ ಶಾಲೆ ಕಡೆಯಿಂದ ಬಂದು ಸಂತೆಬೆನ್ನೂರಿನಲ್ಲಿ ದಿನಸಿ ತೆಗೆದುಕೊಳ್ಳಲು ಹೋದಾಗ ರಸ್ತೆಯಲ್ಲಿ ಮಾಂಗಲ್ಯ ಸರ ಸಿಕ್ಕಿತ್ತು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಹೋಬಳಿಯಲ್ಲಿ ಈ ಘಟನೆ ನಡೆದಿದ್ದು, ಈ ಮಾಂಗಲ್ಯ ಸರವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇನ್ನು ಪ್ರಮಾಣಿಕತೆ ಮೆರೆದ ದಂಪತಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಕೊಗಲೂರು ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದ್ದು, ಅವರ ಪರ ಸಮಾಜದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.
ಕಳೆದು ಹೋದ ಸರ ಸಿಕ್ಕ ಸಂಭ್ರಮದಲ್ಲಿ ಪ್ರಾಧ್ಯಾಪಕ ದಂಪತಿ: ಇನ್ನು ಸಂತೆಬೆನ್ನೂರಿನ ರಸ್ತೆಯಲ್ಲಿ ಸಿಕ್ಕ ಚಿನ್ನದ ಸರವನ್ನು ಪೊಲೀಸರಿಗೆ ಒಪ್ಪಿಸಿದ ತಕ್ಷಣ ಅದರ ವಾರಸುದಾರರು ಯಾರೆಂದು ಪೊಲೀಸರು ಪತ್ತೆ ಹಚ್ಚಿ ಒಪ್ಪಿಸಲಾಗಿದೆ. ಇನ್ನು ಈ ಚಿನ್ನದ ಸರ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಪ್ರಾಧ್ಯಾಪಕ ಕುಮಾರ್ ಅವರ ಪತ್ನಿ ಲತಾ ಎಂಬುವರಿಗೆ ಸೇರಿದ್ದಾಗಿದೆ.
ಲತಾ ಅವರು ಇಂದು ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರು. ಕಳೆದುಕೊಂಡ ಸರದ ಬಗ್ಗೆ ಲತಾ ಅವರು ಸಂತೆಬೆನ್ನೂರು ಪೊಲೀಸ್ ಠಾಣೆಗೆ ತೆರಳಿ ಬೆಳಗ್ಗೆಯೇ ಮಾಹಿತಿ ನೀಡಿದ್ದರು. ಇನ್ನು ಶಿಕ್ಷಕ ದಂಪತಿ ತಂದು ಕೊಟ್ಟ ರಸ್ತೆಯಲ್ಲಿ ದೊರೆತ ಚಿನ್ನದ ಸರವನ್ನು ಸಂತೆಬೆನ್ನೂರು ಠಾಣೆ ಪೊಲೀಸರು ವಾರಸುದಾರರಾದ ಲತಾ ಅವರಿಗೆ ಒಪ್ಪಿಸಿದ್ದಾರೆ.