ದಾವಣಗೆರೆ: ಹೃದಯಸ್ತಂಭನದಿಂದ ನಿಧನರಾದ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಅಭಿಮಾನಿಯೊಬ್ಬರು ವಿಶೇಷವಾಗಿ ಗೌರವ ನಮನ ಸಲ್ಲಿಸಿದ್ದಾರೆ.
ಮನೋಜ್ಞ ನಟನೆ, ಸರಳತೆ ಹಾಗು ಆತ್ಮೀಯ ಗುಣಗಳಿಂದ ಪುನೀತ್ ರಾಜ್‌ಕುಮಾರ್ ನಾಡಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದಿಗೆ ಅಪ್ಪು ಇಹಲೋಕವನ್ನಗಲಿ 11 ದಿನಗಳು ಕಳೆದಿದ್ದು, ಕುಟುಂಬಸ್ಥರು ಪುಣ್ಯತಿಥಿ ಆಚರಿಸಿದರು. ರಾಜ್ಯದ ನಾನಾಕಡೆಗಳಲ್ಲೂ ಪುಣ್ಯಸ್ಮರಣೆ ಕಾರ್ಯಕ್ರಮಗಳು ನಡೆಯುತ್ತಿವೆ.