ದಾವಣಗೆರೆ:ಎನ್ಐಎ ಅಧಿಕಾರಿಗಳು ದಾವಣಗೆರೆಯಲ್ಲಿ ದಾಳಿ ನಡೆಸಿ, ಪಿಎಫ್ಐ ಸಂಘಟನೆ ಮುಖಂಡರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದ್ರೆ ಈ ಸಂಘಟನೆ ಜೊತೆ ಸಂಪರ್ಕದಲ್ಲಿದ್ದ ಜಿಲ್ಲೆಯ ಹರಿಹರದ ತಾಹೀರ್ ಹುಸೇನ್ ಎನ್ಐಎ ಅಧಿಕಾರಿಗಳಿಗೆ ಸಿಗದ ಹಿನ್ನೆಲೆ ಆತನಿಗಾಗಿ ಹುಡುಕಾಟ ಆರಂಭಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ನಗರದ ಜೆಸಿ ಬಡಾವಣೆಯ ನಿವಾಸಿ ತಾಹೀರ್ ಹುಸೇನ್ನನ್ನು ವಶಕ್ಕೆ ಪಡೆಯಲು, ಕಳೆದ ಒಂದು ವಾರದಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶಿವಮೊಗ್ಗ, ಉಡುಪಿ, ಬೆಂಗಳೂರು ಮೂರು ಜಿಲ್ಲೆಗಳಲ್ಲೂ ಪೊಲೀಸರು ಹುಡುಕಿದ್ದಾರೆ.